Every question from the Kannada Literature Optional papers of UPSC Mains 2026, placed in its syllabus unit and checked against all questions asked from 2013 to 2025. See what was familiar, what came back and what was new.
Other years:
What stood out in 2026
- More marks than usual: ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ (100 marks, against an average of 81); ವಿಭಾಗ ಬ: ಜಾನಪದ ಸಾಹಿತ್ಯ (70 marks, against an average of 55); ಕನ್ನಡ ಭಾಷೆಯ ಚರಿತ್ರೆ (60 marks, against an average of 46).
- Fewer marks than usual: ಕನ್ನಡ ಸಾಹಿತ್ಯ ಚರಿತ್ರೆ (70 marks, against an average of 109).
- 3 questions were close repeats of an earlier paper: Q5a (Paper I), first seen in 2017; Q5c (Paper I), first seen in 2023; Q5d (Paper I), first seen in 2023.
- Every question came from a topic UPSC had asked recently.
Which units got the marks in 2026
Marks asked from each unit in 2026 (dark bar) against its average for 2013–2025 (grey bar).
Paper I
| Unit | 2026 | Average 2013–25 |
|---|---|---|
| ಕನ್ನಡ ಭಾಷೆಯ ಚರಿತ್ರೆ | 60 | 46 |
| ಕನ್ನಡ ಸಾಹಿತ್ಯ ಚರಿತ್ರೆ | 70 | 109 |
| ಆಧುನಿಕ ಕನ್ನಡ ಸಾಹಿತ್ಯ | 70 | 66 |
| ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ | 100 | 96 |
| ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ | 100 | 81 |
Paper II
| Unit | 2026 | Average 2013–25 |
|---|---|---|
| ವಿಭಾಗ ಅ: ಹಳಗನ್ನಡ ಸಾಹಿತ್ಯ | 50 | 52 |
| ವಿಭಾಗ ಅ: ನಡುಗನ್ನಡ ಸಾಹಿತ್ಯ | 150 | 148 |
| ವಿಭಾಗ ಬ: ಆಧುನಿಕ ಕನ್ನಡ ಸಾಹಿತ್ಯ | 130 | 130 |
| ವಿಭಾಗ ಬ: ಜಾನಪದ ಸಾಹಿತ್ಯ | 70 | 55 |
A question that fits two units is split equally between them.
Paper I
Q1a. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕನ್ನಡದ ಯಾವುದಾದರೂ ಎರಡು ಪ್ರಾದೇಶಿಕ ಉಪಭಾಷೆಗಳನ್ನು ಪರಿಚಯಿಸಿ. (10 marks)
Q1b. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ‘ವಿಕ್ರಮಾರ್ಜನ ವಿಜಯಂ’ ಕಾವ್ಯದ ‘ದುಶ್ಶಾಸನ ವಧೆ’ ಪ್ರಸಂಗದಲ್ಲಿ ಕಂಡು ಬರುವ ಹಿಂಸೆಯ ಅಭಿವ್ಯಕ್ತಿ. (10 marks)
Q1c. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ‘ಶರಣಸತಿ – ಲಿಂಗಪತಿ’ ಪರಿಕಲ್ಪನೆ ವಚನಗಳ ಸಂದರ್ಭದಲ್ಲಿ ಹೇಗೆ ವಿಶಿಷ್ಟ? (10 marks)
Q1d. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಭಕ್ತಿ ಮತ್ತು ದೇವರ ನಡುವಿನ ಸಂಬಂಧ ಕನಕದಾಸರ ಕೀರ್ತನೆಗಳಲ್ಲಿ ಹೇಗೆ ವ್ಯಕ್ತವಾಗಿದೆ? (10 marks)
Q1e. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ನವ್ಯ ಸಾಹಿತ್ಯಕ್ಕೆ ದೊರೆತ ಪಶ್ಚಿಮದ ಪ್ರೇರಣೆಗಳು. (10 marks)
Q2a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ದಕ್ಷಿಣ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಗಳ ಸಾದೃಶ್ಯವನ್ನು ವಿವರಿಸಿ. (20 marks)
Q2b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಪ್ರಗತಿಶೀಲ ಸಾಹಿತ್ಯಕ್ಕೂ ಮಾರ್ಕ್ಸ್ವಾದಕ್ಕೂ ಇರುವ ಸಂಬಂಧವನ್ನು ವಿವರಿಸಿ. (20 marks)
Q2c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ನಾಗಚಂದ್ರ ಚಿತ್ರಿಸಿರುವ ಉದಾತ್ತ ರಾವಣನ ಪಾತ್ರ. (10 marks)
Q3a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಜನ್ನನ ‘ಯಶೋಧರ ಚರಿತೆ’ ಯಲ್ಲಿ ನಿರೂಪಿತವಾಗಿರುವ ಕಾಮದ ಸ್ವರೂಪವನ್ನು ವಿಶ್ಲೇಷಿಸಿ. (20 marks)
Q3b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ನವೋದಯ ಕನ್ನಡ ಸಾಹಿತ್ಯವು ಆಧುನಿಕತೆಗೆ ಮುಖಾಮುಖಿಯಾದ ಬಗೆಯನ್ನು ವಿಶ್ಲೇಷಿಸಿ. (20 marks)
Q3c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಪದ ಸ್ವೀಕರಣೆ’ ಎಂದರೇನು? ಉದಾಹರಣೆಗಳೊಂದಿಗೆ ವಿವರಿಸಿ. (10 marks)
Q4a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನ್ನಡ ಭಾಷೆಯ ಹಳಮೆಯನ್ನು ನಿದರ್ಶನಗಳೊಂದಿಗೆ ಖಚಿತ ಪಡಿಸಿ. (20 marks)
Q4b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನ್ನಡ ದಲಿತ ಸಾಹಿತ್ಯದ ಮೇಲೆ ಗಾಂಧಿ – ಅಂಬೇಡ್ಕರ್ ಲೋಹಿಯಾ ಪ್ರಭಾವ ಬೀರಿದ ಬಗೆಯನ್ನು ವಿವರಿಸಿ. (20 marks)
Q4c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕುಲದ ಹಿರಿಮೆ ನಿರಸನಗೊಂಡು ಸ್ಮಶಾನದಲ್ಲಿ ಸತ್ಯದರ್ಶನವಾದ ಘಟನೆಯ ಧ್ವನ್ಯರ್ಥವನ್ನು ವಿವರಿಸಿ. (10 marks)
Q5a. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಅಲಂಕಾರಗಳಲ್ಲಿ ‘ರೀತಿ’ಯ ಮಹತ್ವ. (10 marks)
Q5b. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ‘ಮಿಷೆಲ್ ಫುಕೋ’ನ ಡಿಸ್ಕೋರ್ಸ್ (Discourse) ಪರಿಕಲ್ಪನೆ. (10 marks)
Q5c. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಹೊಯ್ಸಳರ ಕಾಲದ ವಾಸ್ತುಶಿಲ್ಪ. (10 marks)
Q5d. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಭಾರತೀಯ ಸಂಗೀತಕ್ಕೆ ಕರ್ನಾಟಕದ ಕೊಡುಗೆ. (10 marks)
Q5e. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಆಧುನಿಕ ಪೂರ್ವ ಕನ್ನಡ ಸಾಹಿತ್ಯದಲ್ಲಿ ಜೈನಧರ್ಮದ ಪ್ರತಿನಿಧೀಕರಣ. (10 marks)
Q6a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕಾವ್ಯ ಮೀಮಾಂಸೆಯಲ್ಲಿ ನಡೆದ ‘ಸಹೃದಯ’ ಮತ್ತು ‘ಕಾವ್ಯ ಪ್ರಯೋಜನ’ದ ಕುರಿತ ಚರ್ಚೆಯನ್ನು ಸಂಗ್ರಹಿಸಿ ನಿರೂಪಿಸಿ. (20 marks)
Q6b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಕಲ್ಯಾಣ ಚಾಲುಕ್ಯರ ಪಾತ್ರವೇನು? ವಿಶ್ಲೇಷಿಸಿ. (20 marks)
Q6c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನ್ನಡದಲ್ಲಿ ಮಹಿಳಾವಾದ ಕಾಣಿಸಿಕೊಂಡ ಬಗೆಯನ್ನು ಐತಿಹಾಸಿಕವಾಗಿ ನಿರೂಪಿಸಿ. (10 marks)
Q7a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ವಸಾಹತೋತ್ತರ ವಿಮರ್ಶೆಯಲ್ಲಿ ಎಡ್ವರ್ಡ್ ಸಯೀದ್ನ ‘ಓರಿಯೆಂಟಲಿಸಂ’ (Orientalism) ಬೀರಿದ ಪ್ರಭಾವವನ್ನು ವಿಶ್ಲೇಷಿಸಿ. (20 marks)
Q7b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ವಿಜಯನಗರ ಸಾಮ್ರಾಜ್ಯ ಹುಟ್ಟಿಹೊಂಡ ಸಂಕೀರ್ಣ ರಾಜಕೀಯ ವಿದ್ಯಮಾನದ ಕುರಿತು ವಿವರಿಸಿ. (20 marks)
Q7c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕರ್ನಾಟಕದ ಚಿತ್ರಕಲೆಗೆ ಮೈಸೂರು ಅರಸರ ಕಾಲದ ಕೊಡುಗೆ. (10 marks)
Q8a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಮಾರ್ಕ್ಸ್ವಾದಿ ಸಾಹಿತ್ಯ ವಿಮರ್ಶೆಯ ಸ್ವರೂಪ ಮತ್ತು ಲಕ್ಷಣಗಳನ್ನು ವಿವರಿಸಿ. (20 marks)
Q8b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕರ್ನಾಟಕದ ವಾಸ್ತುಶಿಲ್ಪದ ಮೇಲೆ ಇಸ್ಲಾಂ ಧರ್ಮದ ಪ್ರಭಾವವನ್ನು ವಿವರಿಸಿ. (20 marks)
Q8c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಶಾಂತರಸ’ದ ಅನನ್ಯತೆಯನ್ನು ಪರಿಚಯಿಸಿ. (10 marks)
Paper II
Q1a. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಮೊರೆಯ ಪರಿಗಳ್ ಭೋರೆಂದೋರಂತೆ ಮಂಗಳ ಗೀತಿಗಳ್
ನೆರೆಯೆ ಗಣಿಕಾನೀಕಂ ಬಂದಾಡೆ ಪುಣ್ಯಜಲಂಗಳಿಂ
ತರಿಸಿ ಮಿಸಿಸುತ್ತಾಗಳ್ ತಾಂ ತನ್ನ ಕೈಯ್ಯೊಳೆ ಕಟ್ಟಿದಂ
ಕುರುಪರಿವೃಢಂ ಕರ್ಣಂಗಾ ವೀರಪಟ್ಟದ ಪಟ್ಟಮಂ (10 marks)
Q1b. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಉಟ್ಟುದ ತೊರೆದವಂಗೆ ಊರೇನು, ಕಾಡೇನು?
ನಷ್ಟಸಂತಾನಕ್ಕೆ ಕುಲವೇನು, ಫಲವೇನು?
ಹುಟ್ಟುಗೆಟ್ಟಾತಂಗೆ ಪುಣ್ಯವೇನು, ಪಾಪವೇನು?
ಅದು ಕೆಟ್ಟದು, ಅದು ಕೆಟ್ಟದು
ನಿನ್ನ ನೀನರಿಯದೆ ದಿಟ್ಟ ಬಯಲಲ್ಲಿ
ಬಿದ್ದೆಯಲ್ಲಾ ಅಜಗಣ್ಣ ತಂದೆ ! (10 marks)
Q1c. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಸತ್ಯಧರ್ಮಗಳ ನಿತ್ಯವು ಬೋಧಿಸೆ
ತೊತ್ತಿನ ಮನಸಿಗೆ ಸೊಗಸೀತೆ
ತತ್ವದ ಅರ್ಥವ ವಿಚಿತ್ರದಿ ಪೇಳೆ
ಕತ್ತೆಯ ಚಿತ್ತಕೆ ಹತ್ತೀತೆ
ಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿ
ಮುತ್ತು ಕೊಟ್ಟರೆ ಮಾತನಾಡೀತೆ
ಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ
ಅರ್ಥಿಯ ತೋರದೆ ಇದ್ದೀತೆ (10 marks)
Q1d. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಸರಳ ಕೊರತೆಯೊ ಸಾರಥಿಯ ಮ
ತ್ಸರವೊ ರಥದ ವಿಘಾತಿಯೋ ದು
ರ್ಧರ ಧನುರ್ಭಂಗವೊ ಮಹಾಸ್ತ್ರ ವ್ಯಥೆಯೊ ರವಿಸುತನ
ಹುರುಳು ಗೆಡಿಸಿದರೆಂತು ರಿಪುರಾ
ಯರಿಗೆ ನಾವ್ ಗೋಚರವೆ ದುರಿತೋ
ತ್ಕರುಷವೈಸಲೆ ನಮ್ಮ ಕೆಡಿಸಿತು ಶಿವಶಿವಾ ಎಂದ (10 marks)
Q1e. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕೊಡದ ಸಾಲಂದದ ಮುಗಿಲ ಕಾಮನಬಿಲ್ಲು
ಬಡಿಗೆಯಿಂ ಬಡಿಯೆ ದೈವಗಳು
ಒಡೆದಂತೆ ಗುಡುಗಾದುದೊಳಗಿದ್ದ ನೀರು ತೊ
ಟ್ಟಿಡುವಂತೆ ಕರೆದುದು ವೃಷ್ಟಿ (10 marks)
Q2a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಪಂಪ ಕವಿಯ ಕರ್ಣನ ಪಾತ್ರದ ಮೂಲಕ ವೀರಯುಗದ ಶೌರ್ಯ ಮತ್ತು ತ್ಯಾಗದ ಮೌಲ್ಯಗಳನ್ನು ಹೇಗೆ ಪ್ರತಿಪಾದಿಸಿದ್ದಾನೆ ವಿಶ್ಲೇಷಿಸಿ. (20 marks)
Q2b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ವಿದ್ಯುಚ್ಚೋರನೆಂಬ ರಿಸಿಯ ಕಳ್ಳತನದ ತಂತ್ರಗಳು ಮತ್ತು ಪರಿಣಾಮಗಳನ್ನು ಸಮಕಾಲೀನ ನೆಲೆಯಲ್ಲಿ ವಿವೇಚಿಸಿ. (20 marks)
Q2c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಅಕ್ಕಮಹಾದೇವಿಯ ಸ್ತ್ರೀ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆಕೆಯ ವಚನಗಳ ಮೂಲಕ ವಿವರಿಸಿ. (10 marks)
Q3a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕುಮಾರವ್ಯಾಸ ಭಾರತದ ಕರ್ಣ ಮತ್ತು ಅರ್ಜುನರ ಯುದ್ಧ ಪ್ರಸಂಗದಲ್ಲಿ ಕಂಡು ಬರುವ ಯುದ್ಧ ನೀತಿಯ ಬಗ್ಗೆ ಬರೆಯಿರಿ. (20 marks)
Q3b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: “ಮಾಡಿ ತೆಲ್ಲಂ ಪೂಜೆಯಾಗಿ, ಆಡಿ ತೆಲ್ಲಂ ಸ್ತುತಿಯಾಗಿ” – ಎಂಬ ಮಾತು ನಂಬಿಯಣ್ಣನ ಜೀವನದಲ್ಲಿ ಉಂಟುಮಾಡಿದ ಪರಿಣಾಮಗಳನ್ನು ವಿವರಿಸಿ. (20 marks)
Q3c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಸಮಾನತೆಯ ಪರಿಕಲ್ಪನೆ ಹೇಗೆ ಬಿಂಬಿತವಾಗಿದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿಮರ್ಶಿಸಿ. (10 marks)
Q4a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಭರತ-ಬಾಹುಬಲಿ ಯುದ್ಧದ ಪ್ರಸಂಗದಲ್ಲಿನ ಬದಲಾವಣೆ ಕುರಿತು ಕವಿ ರತ್ನಾಕರವರ್ಣಿ ಪ್ರಕಟಿಸಿರುವ ಔಚಿತ್ಯವನ್ನು ವಿವರಿಸಿ. (20 marks)
Q4b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಬಸವಣ್ಣನವರ ವಚನಗಳಲ್ಲಿ ಕಂಡುಬರುವ ಸಾಮಾಜಿಕ ಸುಧಾರಣೆಯ ಸ್ವರೂಪವನ್ನು ವಿವೇಚಿಸಿ. (20 marks)
Q4c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನಕದಾಸರ ಕೀರ್ತನೆಗಳಲ್ಲಿ ಬಿಂಬಿತವಾಗಿರುವ ಭಾವಗಳನ್ನು, ನೋವುಗಳನ್ನು ವಿವರಿಸಿ. (10 marks)
Q5a. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ಶೂದ್ರತಪಸ್ವಿ ನಾಟಕದಲ್ಲಿನ ಶಂಬೂಕನ ಪಾತ್ರ (10 marks)
Q5b. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ಪಿ. ಲಂಕೇಶರ ‘ನಿವೃತ್ತರು’ ಕಥೆಯಲ್ಲಿ ವೃದ್ಧರ ನಿಜ ಸ್ವರೂಪ (10 marks)
Q5c. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ‘ಕೊಣವೇಗೌಡ’ ಕಥೆನ ಗೀತೆ (10 marks)
Q5d. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ವಿಲಿಯಂ ಥಾಂಸ್ ಮತ್ತು ಜಾನಪದ (10 marks)
Q5e. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ಒಗಟುಗಳ ವರ್ಗೀಕರಣ (10 marks)
Q6a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಸಿದ್ದಲಿಂಗಯ್ಯನವರ ಕವಿತೆಗಳಲ್ಲಿ ಜನಪರ ಆಶಯಗಳನ್ನು ಗುರುತಿಸಿ. (20 marks)
Q6b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ನವ್ಯಕಥೆಗಳ ವಸ್ತು ಮತ್ತು ಭಾಷೆಯ ಲಕ್ಷಣಗಳನ್ನು ವಿವರಿಸಿ. (20 marks)
Q6c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: “ಮಾಧವಿಯು ಪುರುಷ ಶೋಷಣೆಯನ್ನು ಪ್ರತಿಭಟಿಸುವ ಆಧುನಿಕ ಮಹಿಳೆ” – ಈ ಹೇಳಿಕೆಯನ್ನು ಪರಾಮರ್ಶಿಸಿ. (10 marks)
Q7a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: “ಬೀದಿಮಕ್ಕಳು ಬೆಳದೊ” ಪುಸ್ತಕದ ಹಿನ್ನೆಲೆಯಲ್ಲಿ ಸಮುದಾಯಗಳ ಅನುಭವದ ಅಂತಃಸತ್ವವನ್ನು ಬಿಂಬಿಸುವಲ್ಲಿ ಗಾದೆಗಳ ಮಹತ್ವವನ್ನು ವಿವರಿಸಿ. (20 marks)
Q7b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಜಮೀನ್ದಾರಿ ಮತ್ತು ಆಡಳಿತಶಾಹಿ ವ್ಯವಸ್ಥೆಯ ದಲಿತ ಶೋಷಣೆಯ ಮುಖಗಳು ‘ಒಡಲಾಳ’ ಕಾದಂಬರಿಯಲ್ಲಿ ಹೇಗೆ ಚಿತ್ರಿತವಾಗಿವೆ. (20 marks)
Q7c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ತೊಘಲಖ್’ ನಾಟಕದ ಮಲತಾಯಿಯ ಪಾತ್ರದ ಮಹತ್ವವನ್ನು ಪರಿಚಯಿಸಿ. (10 marks)
Q8a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ದೇವರ ನಂಬಿಕೆಯ ಬಗ್ಗೆ ನಾಸ್ತಿಕರು – ಆಸ್ತಿಕರು ಇವರಲ್ಲಿರುವ ಚರ್ಚೆ ಹಾಗೂ ವಾಗ್ವಾದಗಳನ್ನು ವಿಶ್ಲೇಷಿಸಿ. (20 marks)
Q8b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: “ಕನ್ನಡ ಜನಪದ ಕಥೆಗಳ ಎಲ್ಲಾ ವರ್ಗದ ಕಥೆಗಳಿಗೂ ‘ಕನ್ನಡ ಜನಪದ ಕಥೆಗಳು’ ಸಂಗ್ರಹ ಒಂದು ಉತ್ತಮ ಮಾದರಿಯಾಗಿದೆ” – ಈ ಹೇಳಿಕೆಯನ್ನು ವಿಮರ್ಶಿಸಿ. (20 marks)
Q8c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಗೋಪಾಲಯ್ಯ ಭೂಮಿ ಮತ್ತು ನಿಸರ್ಗದೊಡನೆ ನಡೆಸುವ ಹೋರಾಟವನ್ನು ವಿವರಿಸಿ. (10 marks)
Spotted something wrong?
If a question is in the wrong unit or a match looks wrong, please report an error.
Related: Overall Kannada Literature PYQ analysis · Year-wise question papers · Topic-wise PYQs

