Here are all 58 questions on ವಿಭಾಗ ಅ: ಹಳಗನ್ನಡ ಸಾಹಿತ್ಯ asked in UPSC Kannada Literature Optional Paper II (2008–2026), arranged under the 2 topics of this unit. Within each topic the latest questions come first.
Each question ends with a code such as [2024/15m/3b] – the year, the marks, the word limit (where UPSC set one) and the question number in the paper.

1.1] ಪಂಪ
37 questions
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಮೊರೆಯ ಪರಿಗಳ್ ಭೋರೆಂದೋರಂತೆ ಮಂಗಳ ಗೀತಿಗಳ್
ನೆರೆಯೆ ಗಣಿಕಾನೀಕಂ ಬಂದಾಡೆ ಪುಣ್ಯಜಲಂಗಳಿಂ
ತರಿಸಿ ಮಿಸಿಸುತ್ತಾಗಳ್ ತಾಂ ತನ್ನ ಕೈಯ್ಯೊಳೆ ಕಟ್ಟಿದಂ
ಕುರುಪರಿವೃಢಂ ಕರ್ಣಂಗಾ ವೀರಪಟ್ಟದ ಪಟ್ಟಮಂ [2026/10m/1a]ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಪಂಪ ಕವಿಯ ಕರ್ಣನ ಪಾತ್ರದ ಮೂಲಕ ವೀರಯುಗದ ಶೌರ್ಯ ಮತ್ತು ತ್ಯಾಗದ ಮೌಲ್ಯಗಳನ್ನು ಹೇಗೆ ಪ್ರತಿಪಾದಿಸಿದ್ದಾನೆ ವಿಶ್ಲೇಷಿಸಿ. [2026/20m/2a]
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕಲಿಯನೆ ಪಂದೆ ಮಾಟ್ಟಿ ಕಡುವಂದಿಯನೊಳ್ಗಲಿ ಮಾಟ್ಟಿ ತಕ್ಕನಂ
ಪೊಲೆಯನೆ ಮಾಟ್ಟಿ ಮುಂ ಪೊಲೆಯನಂ ನಱೆ ತಕ್ಕನೆ ಮಾಟ್ಟಿ
ಗ್ಗಲಿಸಿ ಪೊದಮ್ದಿ ಪರ್ವಿದ ವಿವೇಕತೆಯಿಂ ನೃಪಚಿತ್ತ ವೃತ್ತಿ ಚಂ
ಚಲಮದರಿಂದಮೋಲಗಿಸಿ ಬಾಮ್ವಿದೆ ಕಷ್ಟಮಿಳಾಧಿ ನಾಥರಂ ।। [2025/10m/1a]ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಭೀಮನು ತನ್ನ ಹಾಗೂ ದ್ರೌಪದಿಯ ಪ್ರತಿಜ್ಞೆಯನ್ನು ಪೂರೈಸಿಕೊಂಡ ಸನ್ನಿವೇಶವು ವಿಕ್ರಮಾರ್ಜುನ ವಿಜಯದಲ್ಲಿ ಹೇಗೆ ನಿರೂಪಿತವಾಗಿದೆ? ವಿವರಿಸಿ. [2025/20m/2a]
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಭೇದಿಸಲೆಂದ ದಲ್ ನುಡಿದರೆನ್ನದಿರೊಯ್ಯನೆ ಕೇಳಕರ್ಣ ನಿ
ನ್ನಾದಿಯೊಳಬ್ಬೆ ಕೊಂತಿ ನಿನಗಮ್ಮನಿಹರ್ಪತಿ ಪಾಂಡುನಂದನರ್
ಸೋದರರೆಯ್ದೆ ಮಯ್ದುನನೆನಾಂ ಪೇಱುತೇಂ ಪಡೆಮಾತೊನಿನ್ನದಿ
ಮೇದಿನಿ ಪಟ್ಟಮಂ ನಿನತೆ ನೀನಿರೆ ವಾತ್ತೆ ಪೆಱರ್ ನರೇಂದ್ರರೇ [2024/10m/1a]ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಪಂಪನ ‘ವಿಕ್ರಮಾರ್ಜುನ ವಿಜಯ’ ದ ಹದಿಮೂರನೆಯ ಆಶ್ವಾಸದಲ್ಲಿ ಚಿತ್ರಿತವಾದ ದುರ್ಯೋಧನನ ವ್ಯಕ್ತಿತ್ವದ ವೈಶಿಷ್ಟತೆಯನ್ನು ವಿವರಿಸಿ. [2024/20m/2a]
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಪಿಡಿದೆಡಗೆಯ್ಯ ಚಾಮರದ ದಕ್ಷಿಣ ಹಸ್ತದ ಪದ್ಮಮೊಳ್ವೊಡಂ
ಬಡೆ ನಸು ಮಾನಿ ಪಾಡಳಿದ ರೂಪಿನೊಳುಣ್ಮವಗಾಡಿ ನಾಡೆಕ।
ಣ್ಗೆಡರೆ ತೊಡಂಕಿ ಪೀರಿದ ಕುರುಳ್ಗಳೆ ಚಿತ್ತದೊಳಾದ ಬೇಸ ಱಂ
ನುಡಿವವೊಲಾಗೆ ಬರ್ಪ ಕಮಳಾಯತನೇತ್ರೆಯನಿಂದು ವಕ್ತ್ರೆಯಂ॥ [2023/10m/1a]ಪಂಪ ‘ವಿಕ್ರಮಾರ್ಜುನ ವಿಜಯ’ ಎಂದು ಹೆಸರಿಟ್ಟರೂ ‘ಕರ್ಣ ರಸಾಯನಮಲ್ತೆ ಭಾರತಂ’ ಎಂದು ಏಕೆ ಹೇಳುತ್ತಾನೆ? ಚರ್ಚಿಸಿ. [2023/20m/2a]
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಚಾಗದ ನನ್ನಿಯ ಕಲಿತನ
ದಾಗರಮೆನೆ ನೆಗವ್ದಿ ಕರ್ಣನೊಡಲಿಂದೆಂತುಂ
ಪೋಗಲ್ಕರಿಯದೆ ಸಿರಿಕರ
ಮಾಗಳ್ ಕವಿಕರ್ಣ ತಾಳಸಂಚಳೆಯಾದಳ್ [2022/10m/1a]ಪಂಪ ಮತ್ತು ನಾರಾಣಪ್ಪ ಚಿತ್ರಿಸಿರುವ ಕರ್ಣಪಾತ್ರವು ವ್ಯವಸ್ಥೆಯ ಕರಾಳ ಮುಖಗಳನ್ನು ಅನಾವರಣಗೊಳಿಸಿದೆ. ಈ ಮಾತನ್ನು ಪರಿಶೀಲಿಸಿರಿ. [2022/20m/2a]
ಪಂಪ ಮಾರ್ಗ-ದೇಶಿಗಳ ಸಮನ್ವಯವನ್ನು ‘ವಿಕ್ರಮಾರ್ಜುನ ವಿಜಯ’ ದಲ್ಲಿ ಸಾಧಿಸಿದ ರೀತಿಯನ್ನು ಪರಿಶೀಲಿಸಿರಿ. [2022/20m/4b]
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಇದ ಱೊಳ್ ಶ್ವೇತಾತಪತ್ರಸ್ಥಗಿತ ದಶದಿಶಾಮಂಡಲಂ ರಾಜ ಚಕ್ರಂ ।
ಪುದಿದಟ್ಕೊಡಿತ್ತಡಂಗಿತ್ತಿದ ಱೊಳೆ ಕುರು ರಾಜಾನ್ವಯಂ ಮತ್ಪ್ರತಾಪ ।
ಕ್ಕಿದ ಱೆಂದಂ ನೋಡಗುರ್ವುರ್ವಿದುದಿದುವೆ ಮಹಾಭಾರತಕ್ಕಾದಿಯಾಯ್ತು ।
ಬ್ದದಳಾಕ್ಷೀ ಪೇಟಿ ಸಾಮಾನ್ಯಮೆ ಬಗೆಯೆ ಭವತ್ಕೇಶಪಾಶಪ್ರಪಂಚಂ ॥ [2021/10m/1a]ಪಂಪನ ವಿಕ್ರಮಾರ್ಜುನ ವಿಜಯ ಕಾವ್ಯದ ಹಿನ್ನೆಲೆಯಲ್ಲಿ ಆಗಿನ ಜೀವನ ಮೌಲ್ಯಗಳ ಚಿತ್ರಕವನ್ನು ನಿರೂಪಿಸಿರಿ. [2021/20m/2b]
ದುಶ್ಶಾಸನನ ಅಂತ್ಯದ ನಿರೂಪಣೆಯನ್ನು ಪಂಪನಲ್ಲಿ ಹೇಗೆ ಪರಿಭಾವಿಸಲಾಗಿದೆ? ವಿವರಿಸಿರಿ. [2021/10m/3c]
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಒಡಲೆರಡೊಂದೆ ಜೀವಮಿವರ್ಗೆಂಬುದನೆಂಬುದು ಲೋಕಮೀಗಳಾ
ನುಡಿ ಪುಸಿಮಾಯ್ತು ನಿನ್ನಸು ಕಿರೀಟಿಯ ಶಾತಶರಂಗಳಿಂದೆ ಪೋ
ಪೊಡಮೆನಗಿನ್ನು ಮೀಯೊಡ ಲೊಳಿರ್ದುದು ನಾಣಿಲಿಜೀವಮೆಂದೊಡಾ
ವೆಡೆಯೊಳೆ ನಿನ್ನೊಳೆನ್ನ ಕಡುಗೂರ್ಮೆಯುಮಟ್ಕಿಯುಮಂಗವಲ್ಲಭಾ ॥ [2020/10m/1a]ಭೀಮನು ಪ್ರತಿಜ್ಞೆ ಪೂರೈಸಿ ದ್ರೌಪದಿಯನ್ನು ಸಮಾಧಾನ ಪಡಿಸಿದ ಪರಿಯನ್ನು ಪಂಪ ‘ವಿಕ್ರಮಾರ್ಜುನ ವಿಜಯ’ದಲ್ಲಿ ಹೇಗೆ – ಚರ್ಚಿಸಿದ್ದಾನೆ? ವಿವರಿಸಿರಿ. [2020/20m/3b]
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಪಸರಿಸಿ ಪಂದಲೆಯಂ ಮೆ ।
ಟ್ಟಿಸಿ ವೈರಿಯ ಪಲ್ಲ ಪಣಿಗೆಯಿಂ ಬಾರ್ಚಿ ಪೊದ ।।
ಳ್ದೊಸಗೆ ಯಿನವನ ಕರುಳ್ಗಳೆ ।
ಪೊಸ ವಾಸಿಗಮೊಗೆ ಕೃಷ್ಣೆಯಂ ಮುಡಿಯಿಸಿದಂ [2019/10m/1a]ಪಂಪನ ‘ವಿಕ್ರಮಾರ್ಜುನ ವಿಜಯ’ ಮತ್ತು ನಾರಣಪ್ಪನ ‘ಕುಮಾರವ್ಯಾಸ ಭಾರತ’ ಗಳಲ್ಲಿ ಚಿತ್ರಿತವಾದ ಕರ್ಣನ ಪಾತ್ರದ ಸಾಮ್ಯ, ವ್ಯತ್ಯಾಸ ಮತ್ತು ವೈಶಿಷ್ಟ್ಯಗಳನ್ನು ಚರ್ಚಿಸಿ. [2019/20m/2a]
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ನಿನ್ನನೆ ನೆಚ್ಚಿದಂ ಕುರು ಮಹೀಪತಿ ನಿನ್ನ ಶರಾವಳಿಗಳ್ಗೆಮು
ನ್ನಡುಗುತ್ತುಮಿರ್ಪುದರಿ ಸಾಧನ ಸಂಪದಮಂತೆ ಶಸ್ತ್ರಸಂ
ಪನ್ನನೆ ಆಗಿ ಶಲ್ಯನನೆ ಸಾರಥಿಯಾಗಿರೆ ಮಾಡಿ ಕಾದು ನೀಂ
ನಿನ್ನಯ ಬಲ್ಲ ಮಾಟ್ಕೆಯೊಳಿದಂ ನುಡಿದೆಂ ನಿನಗಂಗವಲ್ಲಭಾ [2018/10m/1a]ಪಂಪನ ‘ವಿಕ್ರಮಾರ್ಜುನ ವಿಜಯ’ ಕಾವ್ಯದಲ್ಲಿ ಕರ್ಣನ ಶೌರ್ಯ ಮತ್ತು ತ್ಯಾಗದ ಗುಣಗಳನ್ನು ಕುರಿತು ಚರ್ಚಿಸಿ. [2018/20m/2a]
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾಗ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ) ಸಕಲಾರಾತಿ ನರೇಂದ್ರ ಮೌಳಿಗಳುರುಳ್ದಾ ದೀಪ್ತ ರತ್ನಾಂಶು ಮಾ
ಳಿಕೆಯಿಂದಾ ರಣರಂಗಮಂ ಬೆಳಗೆ ಕಾಳ್ಗಿರ್ಚೆಂದು ಭೂತಾಂಗನಾ ।
ನಿಕರಂ ಶೋಣಿತವಾರಿಯಂ ಕುಡಿದಗುರ್ವಪ್ಪನ್ನೆಗಂ ಸೂಸೆ ನೋ
ಡ ಕವಿಲ್ತಿರ್ದುದು ಕೂಡೆ ಸಂಜೆಗವಿದಂತಾ ದ್ರೋಣನಿಂ ಕೊಳ್ಗುಳಂ ।। [2017/10m/1a]ಕರ್ಣನ ಮೂಲಕ ಯಾವ ಮೌಲ್ಯವನ್ನು ಪಂಪನು ತನ್ನ ವಿಕ್ರಮಾರ್ಜುನ ಕಾವ್ಯದಲ್ಲಿ ಎತ್ತಿ ತೋರಿಸಿದ್ದಾನೆ? ವಿವರಿಸಿ. [2017/10m/3c]
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದು 150 ಪದಗಳ ಮೇಲೆ) ಕಲಿಯನೆ ಪಂದೆ ಮುಟ್ಟಿ ಕಡುವಂಕಿಯನೊಳ್ಗಲಿ ಮಾಟ್ಟಿ ತಕ್ಕನಂ
ಪೊಲೆಯನೆ ಮಾಟ್ಟಿ ವಲಂ ಪೊಲೆಯನಂ ನೆಜೆತಕ್ಕನೆ ಮಾಟ್ಟಿ ತಮ್ಮೊಳ
ಗ್ಗಲಿಸಿ ಪೊದದ್ದಿ ಪರ್ವಿದ ವಿವೇಕತೆಯಂ ನೃಪಚಿತ್ತವೃತ್ತಿಸಂ
ಚಲಮದಜೆಂದ ಮೋಲಗಿಸಿ ಬಾಮ್ಬಿದೆ ಕಷ್ಟ ಮಳಾಧಿನಾಥರಂ ।। [2016/10m/1a]“ವಿಕ್ರಮಾರ್ಜುನ ವಿಜಯಂ – ಕ್ಷಾತ್ರ ಜೀವನಕ್ಕೆ ಹಿಡಿದ ಕೈಗನ್ನಡಿ –” ಈ ಹೇಳಿಕೆಯನ್ನು ಸಮರ್ಥಿಸಿ. [2016/20m/2a]
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (150 ಪದಗಳ ಉತ್ತರ ಮಿತಿ): ನೀನುಳ್ಳೊಡೆಲ್ಲರೊಳ ರೆಮ
ಗೇನು ಮವಿಲ್ ಮನದೊಳಿಲ್ಲದೆಂತನೆ ಮಗನೇ ।
ಭಾನುವೇ ಸಾಲದೆ ಪಗಲೆನಿ
ತಾನುಂ ದೀವಿಗೆಗಳುರಿದೊಡೇಂ ನಂದಿದೊಡೇಂ ॥ [2015/10m/1a]ದೇಸಿ ಮಾರ್ಗಗಳ ಸುಂದರ ಸಮನ್ವಯವನ್ನು ಪಂಪನ ನಿಮ್ಮ ಪಠ್ಯಭಾಗದ ಆಧಾರದಲ್ಲಿ ವಿವರಿಸಿರಿ. [2015/20m/2a]
ಪಂಪ ಮತ್ತು ಕುಮಾರವ್ಯಾಸರು ದುರ್ಯೋಧನನನ್ನು ಚಿತ್ರಿಸಿರುವ ಬಗೆಯ ವೈವಿಧ್ಯವನ್ನು ನಿಮ್ಮ ಪಠ್ಯಭಾಗದ ಹಿನ್ನೆಲೆಯಲ್ಲಿ ವಿವರಿಸಿರಿ. [2015/20m/4b]
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ): ಎಳೆ ಮುಂ ದೈತ್ಯನ ಕೆಯ್ಗೆ ಪೋಗೆ ತರಲೆಂದೀ ಚಕ್ರಿ ಮುನ್ನಂ ರಸಾ
ತಳಮಂ ಪೊಕ್ಕುದುಮೀ ಮಹೋಗ್ರ ರಣದೊಳ್ ನಿಮ್ಮೊಂದು ಕೆಯ್ವಳ್ದ ಭೂ
ತಳಮಂ ಮತ್ತೆ ತರಲ್ ವಿಶುದ್ಧ ನಿಯಮ ಪ್ರಾರಂಭದಿಂದಾನು ಮೀ
ಕೊಳನಂ ಪೊಕ್ಕುದುಮಾವ ದೋಷಮೆನಗಿಂ ಮಾರಾಂಪರಾರ್ ತೋರಿರೇ. [2014/10m/1a]ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ): ಆದ ಮುಳಿಸಿಂದ ಮೆಲ್ವಂ
ತೇದು ಕುಡಿಯಲ್ಕೆ ತಕ್ಕ ಪಗೆವನ ರುಧಿರಾ
ಚ್ಛೋದಮನೆ ಕುಡಿದು ಮಾಣ್ದ ವೃ
ಕೋದರನೇನಾವ ತೆರದೊಳಂ ದೋಷಿಗನೇ [2014/10m/1e]‘ಕರ್ಣಂಗೊಡ್ಡಿತ್ತು ದಲ್ ಭಾರತಂ’ ಎಂಬ ಪಂಪನ ಹೇಳಿಕೆಯನ್ನು ಕುಮಾರವ್ಯಾಸನ ಕರ್ಣನ ಪಾತ್ರದೊಡನೆ ಹೋಲಿಸಿ, ಎರಡರ ವ್ಯತ್ಯಾಸವನ್ನು ಚರ್ಚಿಸಿ. [2014/20m/2b]
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (ಪ್ರತಿಯೊಂದೂ 125 ಪದಗಳ ಮಿತಿಯಲ್ಲಿ ಇರಲಿ) ನುಡಿದುದನೆಯ್ದೆ ತುತ್ತ ತುದಿಯೆಯ್ದುವಿನಂ ನುಡಿದಂ ವಲಂ ಚಲಂ
ಬಿಡಿದುದನೆಯ್ದೆ ಮುಂ ಪಿಡಿದುದಂ ಪಿಡಿದಂ ಸಲೆ ಪೂಣ್ದ ಪೂಣ್ಕೆ ನೇ
ರ್ಪಡೆ ನಡೆವನ್ನೆಗಂ ನಡೆವನಳ್ಕದೆ ಬಳ್ಕದೆ ತನ್ನೊಡಲ್ ಪಡ
ಲ್ವಡುವಿನ ಮಣ್ಮುಗುಂದಲೇನಭಿಮಾನ ಧನಂ ಸುಯೋದನಂ [2013/10m/1a]‘ದುಶ್ಯಾಸನ ವಧಾ ಪ್ರಸಂಗ’ವು ಪಂಪಭಾರತದಲ್ಲಿ ಅಭಿವ್ಯಕ್ತಿಗೊಂಡ ಬಗೆಯನ್ನು ಕುಮಾರವ್ಯಾಸನ ಈ ಪ್ರಸಂಗದೊಡನೆ ಹೋಲಿಸಿ – ವಿಶ್ಲೇಷಿಸಿ. (250 ಪದಗಳು) [2013/20m/3b]
‘ವಿಕ್ರಮಾರ್ಜುನ ವಿಜಯ’ದಲ್ಲಿ ಕರ್ಣನ ‘ಭೀಷ್ಮ ದರ್ಶನ’ದ ಪ್ರಸಂಗದ ವೈಶಿಷ್ಟ್ಯತೆಯನ್ನು ವಿವರಿಸಿ. (125 ಪದಗಳು) [2013/10m/4c]
ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: ನೆನೆಯದಿರಣ್ಣ ಭಾರತದೊಳಿಂ ಪೆಱರಾರುಮನೊಂದೆ ಚಿತ್ರದಿಂ ।
ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್‌ದೊರೆ ಕರ್ಣನೇಱುಕ ।
ರ್ಣನ ಕಡುನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು ಕ ।
ರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತ ॥ [2012/12m/1a]ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯಗಳನ್ನು ಕುರಿತು ಬರೆಯಿರಿ: ಇದು ಪಾತಾಳಬಿಲಕ್ಕೆ ಬಾಗಿಲಿದು ದಲ್ ಘೋರಾಂಧಕಾರಕ್ಕೆ ಮಾ
ಡಿದ ಕೂಪಂ ಪೆಱತಲ್ಲಿದುಗ್ರಲಯಕಾಳಾಂಭೋಧರಚ್ಛಾಯೆ ತಾ
ನೆ ದಲೆಂಬಂತಿರೆ ಕಾಚಮೇಚಕಚಯಚ್ಛಾಯಾಂಬುವಿಂ ಗುಣ್ಪಿನಿಂ
ಪುದಿದಿರ್ದತ್ತು ಸರೋವರಂ ಬಕಬಳಾಕಾನೀಕರಾವಾಕುಳಂ [2011/20m/1a]ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯಗಳನ್ನು ಕುರಿತು ಬರೆಯಿರಿ: ಒಡಲೆರಡೊಂದೆ ಜೀವಮಿವರ್ಗೆಂಬುದನೆಂಬುದು ಲೋಕಮೀಗಳಾ ।
ನುಡಿ ಪುಸಿಯಾಯ್ತು ನಿನ್ನಸು ಕಿರೀಟಿಯ ಶಾತ ಶರಂಗಳಿಂದೆ ಪೋ ।।
ಪೊಡೆಮೆನಗಿನ್ನುಮೀಯೊಡಲೊಳಿರ್ದುದು ನಾಣಿಲಿ ಜೀವಮೆಂದೊಡಾ ।
ವೆಡೆಯೊಳೆ ನಿನ್ನೊಳೆನ್ನ ಕಡುಗೂರ್ಮೆಯಮೞ್ಕುಮಂಗವಲ್ಲ ಭಾ ।। [2010/20m/1a]ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯಗಳನ್ನು ಕುರಿತು ಬರೆಯಿರಿ: ದಿವಿಜಾಧೀಶನ ಕೊಟ್ಟ ಶಕ್ತಿಯನದಂ ಕರ್ಣಂ ನರಂಗೆಂದು ಬ
ಯ್ತಿವನಿಂದಿಂದ ಱಿವೆಯ್ದೆ ವಂದೊಡದಱಿಂದಾತನಂ ಕೊಂದನಿ
ನ್ನಿವನಂ ಕೊಲ್ವುದು ಮೊಗ್ಗದರ್ಕೞಲವೇಡೆಂಬನ್ನಮತ್ತೇಱಿದಂ
ರವಿ ಪೂರ್ವಾಚಲಮಂ ನಿಜಾತ್ಮಜನ ಗೆಲ್ದುಗ್ರಾಜಿಯಂ
ನೋೞ್ಪವೋಲ್ [2009/20m/1a]
1.2] ‘ವಡ್ಡಾರಾಧನೆ’
21 questions
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ವಿದ್ಯುಚ್ಚೋರನೆಂಬ ರಿಸಿಯ ಕಳ್ಳತನದ ತಂತ್ರಗಳು ಮತ್ತು ಪರಿಣಾಮಗಳನ್ನು ಸಮಕಾಲೀನ ನೆಲೆಯಲ್ಲಿ ವಿವೇಚಿಸಿ. [2026/20m/2b]
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ವಿದ್ಯುಚ್ಚೋರನ ಕಥೆಯಲ್ಲಿ ಅಂದಿನ ಸಮಾಜದಲ್ಲಿ ಕಾವಲು ಮತ್ತು ನ್ಯಾಯಾಂಗ ವ್ಯವಸ್ಥೆಯ ಚಿತ್ರಣ ಹೇಗೆ ಮೂಡಿ ಬಂದಿದೆ? ವಿವರಿಸಿ. [2025/20m/2b]
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಸುಕುಮಾರ ಸ್ವಾಮಿಯ ಕಥೆಯು ಅನಾವರಣ ಮಾಡುವ ಸಮಕಾಲೀನ ವಿದ್ಯಾಭ್ಯಾಸದ ವಿವರಗಳು. [2025/10m/3c]
ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ‘ವಡ್ಡಾರಾಧನೆ’ ಯ ವಿದ್ಯುಚ್ಚೋರ ಕಥೆಯಲ್ಲಿ ನಿರೂಪಿತವಾಗಿರುವ ಜೈನಧರ್ಮದ ತತ್ವ ಸಿದ್ಧಾಂತಗಳ ಪರಿಣಾಮ ತೀವೃತೆಯನ್ನು ಕುರಿತು ಸಮಾಲೋಚಿಸಿ. [2024/20m/2b]
‘ವಡ್ಡಾರಾಧನೆ’ ಯ ಕಥೆಗಳು ಜೈನ ಧರ್ಮಾವಲಂಬನೆಯಿಂದ ಕೂಡಿದವು ಎನ್ನಬಹುದೆ? ವಿಶ್ಲೇಷಿಸಿ. [2023/20m/2b]
ವಡ್ಡಾರಾಧನೆಯ ಕಥೆಗಳು ಧರ್ಮ ಪ್ರಸಾರಣೆಯನ್ನು ಉದ್ದೇಶವಾಗಿರಿಸಿಕೊಂಡರೂ ಆ ಕಾಲದ ವಸ್ತು ಸ್ಥಿತಿಗೆ ಕನ್ನಡಿ ಹಿಡಿಯುತ್ತವೆ. ಪಠ್ಯದ ಹಿನ್ನೆಲೆಯಲ್ಲಿ ಪರಿಶೀಲಿಸಿರಿ. [2022/20m/2b]
ವಡ್ಡಾರಾಧನೆಯ ಸುಕುಮಾರಸ್ವಾಮಿಯ ಕಥೆಯ ಸ್ವಾರಸ್ಯ ಮತ್ತು ಸಂದೇಶವನ್ನು ಕುರಿತು ಚರ್ಚಿಸಿರಿ. [2021/20m/2a]
ಸುಕುಮಾರಸ್ವಾಮಿಯ ಕಥೆಯಲ್ಲಿ ವರ್ಣನೆಗೊಂಡ ಅಗ್ನಿಭೂತಿ – ವಾಯುಭೂತಿಯರ ವಿದ್ಯಾವ್ಯಾಸಂಗ ಪ್ರಸಂಗದ ಸ್ವಾರಸ್ಯವನ್ನು ನಿರೂಪಿಸಿರಿ. [2020/20m/2a]
‘ವಡ್ಡಾರಾಧನೆ’ ಯ ಕಥೆಗಳು ಬರಿ “ಮನರಂಜನೆಗೋ ಅಥವಾ ಕಲಾಭಿವ್ಯಕ್ತಿಗೋ ಬರೆದ ಕಥೆಗಳಲ್ಲ. ಬದಲಾಗಿ ಧರ್ಮಾವಲಂಬನಾ ಮಾರ್ಗದವು” ಎನ್ನುವ ಮಾತನ್ನು ನಿಮಗೆ ನಿಗದಿತವಾಗಿರುವ ಎರಡು ಕಥೆಗಳ ಆಧಾರದಲ್ಲಿ ಸಮರ್ಥಿಸಿ. [2019/20m/2b]
‘ವಿದ್ಯುಚ್ಚೋರ ರಿಸಿಯ ಕಥೆ’ ಯಲ್ಲಿ ನಿರೂಪಿತವಾಗಿರುವ ಜೈನಧರ್ಮದ ತತ್ವಗಳು ಮತ್ತು ಅವುಗಳ ಪರಿಣಾಮಗಳನ್ನು ಕುರಿತು ವಿಶ್ಲೇಷಿಸಿ. [2018/20m/2b]
‘ಸುಕುಮಾರ ಸ್ವಾಮಿ’ ಕಥೆಯಲ್ಲಿ ತೀವೃತಮ ಭೋಗವು ವೈರಾಗ್ಯಕ್ಕೆ ದಾರಿ ಮಾಡಿಕೊಡುವ ಬಗೆಯು ಹೇಗೆ ಚಿತ್ರಣಗೊಂಡಿದೆ ಎಂಬುದನ್ನು ನಿರೂಪಿಸಿ. [2017/20m/2a]
“ವಡ್ಡಾರಾಧನೆಯು ಜೈನ ತತ್ತ್ವಗಳ ಒಂದು ಕೋಶವಾಗಿದೆ –” ನಿಮಗಿಟ್ಟಿರುವ ಪಠ್ಯದ ಹಿನ್ನೆಲೆಯಲ್ಲಿ ಸ್ಪಷ್ಟಪಡಿಸಿ. [2016/20m/2b]
ಸುಕುಮಾರಸ್ವಾಮಿಯ ಕಥೆಯಲ್ಲಿನ ವಂಶಾವಳಿಗಳ ಸ್ವಾರಸ್ಯವನ್ನು ವಿವರಿಸಿರಿ. [2015/10m/2c]
ಸುಕುಮಾರಸ್ವಾಮಿ ಕಥೆ ಹಾಗೂ ವಿದ್ಯುಚ್ಚೋರ ಕಥೆಗಳಲ್ಲಿ ತಾತ್ವಿಕತೆಯ ದೃಷ್ಟಿಯಿಂದ ಕಾಣುವ ಸಾಮಾನ್ಯ ಅಂಶಗಳನ್ನು ವಿಶ್ಲೇಷಿಸಿರಿ. [2014/20m/2a]
ವಡ್ಡಾರಾಧನೆಯ ಕಥೆಗಳಲ್ಲಿ ಬರುವ ‘ಉಪಕಥೆ’ಗಳ ಅನಿವಾರ್ಯತೆಯನ್ನು ನಿಮಗೆ ಇಟ್ಟಿರುವ ಕಥೆಗಳ ಹಿನ್ನೆಲೆಯಲ್ಲಿ ಚರ್ಚಿಸಿ. [2014/10m/4c]
ಸುಕುಮಾರಸ್ವಾಮಿ ಕಥೆಯಲ್ಲಿ ಭವಾವಳಿಗಳು ರೂಪಿಸುವ ಭೋಗ ಮತ್ತು ವೈರಾಗ್ಯದ ತೀವ್ರತೆಯ ಆಶಯಗಳನ್ನು ಚರ್ಚಿಸಿ. (250 ಪದಗಳು) [2013/20m/2a]
ಸುಕುಮಾರಸ್ವಾಮಿಯ ಕತೆಯಲ್ಲಿ ಮುಖ್ಯಕಥೆ ಉಪಕಥೆಗಳ ಸಂಬಂಧವನ್ನು ವಿವರಿಸಿ. [2012/30m/4b]
ವಡ್ಡಾರಾಧನೆ ಕೃತಿಯ ವಿದ್ಯುಚ್ಚೋರನೆಂಬ ರಿಸಿಯ ಕತೆಯ ನಿರೂಪಣಾ ಕೌಶಲವನ್ನು ವಿವರಿಸಿ. [2011/30m/2a]
ಸುಕುಮಾರಸ್ವಾಮಿ ಕತೆಯ ಆಶಯವನ್ನು ಧಾರ್ವಿಕ ನೆಲೆಯಲ್ಲಿ ಚರ್ಚಿಸಿರಿ. [2011/30m/2b]
ವಡ್ಡಾರಾಧನೆಯ ಸುಕುಮಾರಸ್ವಾಮಿ ಕತೆಯಲ್ಲಿ ಕಂಡು ಬರುವ ಸಾಂಸ್ಕೃತಿಕ ಅಂಶಗಳನ್ನು ವಿವೇಚಿಸಿರಿ. [2010/60m/2]
ಧರ್ಮ ಪ್ರಚಾರ ದೃಷ್ಟಿಯಿಂದ ಸುಕುಮಾರ ಸ್ವಾಮಿಯ ಕಥೆಯಲ್ಲಿ ಬಳಕೆಯಾಗಿರುವ ರಚನಾ ಕೌಶಲ ಮತ್ತು ತಂತ್ರಗಳನ್ನು ವಿವರಿಸಿರಿ. [2009/60m/2]
« Previous: ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ · Next: ವಿಭಾಗ ಅ: ನಡುಗನ್ನಡ ಸಾಹಿತ್ಯ »
Back to: Kannada Literature Optional PYQs – Topic-wise
Last updated: 2 November 2026

