Menu Close

ವಿಭಾಗ ಅ: ನಡುಗನ್ನಡ ಸಾಹಿತ್ಯ – Kannada Literature Optional PYQs (Paper II, Unit 2)

Here are all 176 questions on ವಿಭಾಗ ಅ: ನಡುಗನ್ನಡ ಸಾಹಿತ್ಯ asked in UPSC Kannada Literature Optional Paper II (2008–2026), arranged under the 5 topics of this unit. Within each topic the latest questions come first.

Each question ends with a code such as [2024/15m/3b] – the year, the marks, the word limit (where UPSC set one) and the question number in the paper.

Topic-wise weightage graph of ವಿಭಾಗ ಅ: ನಡುಗನ್ನಡ ಸಾಹಿತ್ಯ, Kannada Literature Optional Paper II
Topic-wise weightage of ವಿಭಾಗ ಅ: ನಡುಗನ್ನಡ ಸಾಹಿತ್ಯ (Kannada Literature Optional Paper II) – share of marks asked from each topic.

2.1] ‘ವಚನ ಕಮ್ಮಟ’

46 questions

  1. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಉಟ್ಟುದ ತೊರೆದವಂಗೆ ಊರೇನು, ಕಾಡೇನು?
    ನಷ್ಟಸಂತಾನಕ್ಕೆ ಕುಲವೇನು, ಫಲವೇನು?
    ಹುಟ್ಟುಗೆಟ್ಟಾತಂಗೆ ಪುಣ್ಯವೇನು, ಪಾಪವೇನು?
    ಅದು ಕೆಟ್ಟದು, ಅದು ಕೆಟ್ಟದು
    ನಿನ್ನ ನೀನರಿಯದೆ ದಿಟ್ಟ ಬಯಲಲ್ಲಿ
    ಬಿದ್ದೆಯಲ್ಲಾ ಅಜಗಣ್ಣ ತಂದೆ ! [2026/10m/1b]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಅಕ್ಕಮಹಾದೇವಿಯ ಸ್ತ್ರೀ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆಕೆಯ ವಚನಗಳ ಮೂಲಕ ವಿವರಿಸಿ. [2026/10m/2c]

  3. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಬಸವಣ್ಣನವರ ವಚನಗಳಲ್ಲಿ ಕಂಡುಬರುವ ಸಾಮಾಜಿಕ ಸುಧಾರಣೆಯ ಸ್ವರೂಪವನ್ನು ವಿವೇಚಿಸಿ. [2026/20m/4b]

  4. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಜಾತಿ ವ್ಯವಸ್ಥೆಯನ್ನು ವಚನಕಾರರು ಪ್ರಶ್ನಿಸಿರುವ ರೀತಿಯನ್ನು ಉದಾಹರಣೆಗಳೊಂದಿಗೆ ವಿವರಿಸಿ. [2025/10m/2c]

  5. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ವಚನಕಾರ್ತಿಯರ ವಚನಗಳಲ್ಲಿ ಕಂಡು ಬರುವ ಪ್ರತಿಮೆಗಳನ್ನು ಕುರಿತು ಚರ್ಚಿಸಿ. [2025/10m/4c]

  6. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಮರಮರ ಮಥನಿಸಿ ಕಿಚ್ಚು ಹುಟ್ಟಿ
    ಸುತ್ತಣ ತರುಮರಾದಿಗಳ ಸುಡಲಾಯಿತ್ತು
    ಆತ್ಮವಾತ್ಮ ಮಥನಿಸಿ ಅನುಭಾವ ಹುಟ್ಟಿ
    ಹೊದ್ದಿರ್ದ ತನುಗುಣಾದಿಗಳ ಸುಡಲಾಯಿತ್ತು
    ಇದು ಕಾರಣ ನಿಮ್ಮ ಮಹಾನುಭಾವಿಗಳ ಅನುಭಾವವ ತೋರಿ
    ಎನ್ನೊ ಡಲನುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ [2024/10m/1c]

  7. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ‘ಸಾಮಾಜಿಕ ಸಾಮರಸ್ಯವೇ ಶರಣರ ವಚನಗಳ ಪ್ರಮುಖ ಆಶಯವಾಗಿದೆ’ – ಚರ್ಚಿಸಿ. [2024/10m/3c]

  8. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಮಹಿಳಾ ವಚನಕಾರ್ತಿಯರ ಅಭಿವ್ಯಕ್ತಿಗೆ ಸತಿಪತಿ ಭಾವದ ಭಕ್ತಿಯೇ ಮೂಲ ಧಾತುವಾಗಿದೆ – ಪರಿಶೀಲಿಸಿ. [2024/20m/4b]

  9. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಕೆಳವರ್ಗದ ವಚನಕಾರರ ‘ಕಾಯಕ’ ಸಂವೇದನೆಗಳು ಅವರ ವಚನಗಳಲ್ಲಿ ಮೂಡಿ ಬಂದಿರುವ ಬಗೆಯನ್ನು ಪರಾಮರ್ಶಿಸಿ. [2024/10m/4c]

  10. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ
    ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ
    ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ
    ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ
    ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ
    ಚೆನ್ನಮಲ್ಲಿಕಾರ್ಜುನಾ ನೀನೊಡ್ಡಿದ ಮಾಯೆಯನಾರೂ ಗೆಲಲಾರರು … [2023/10m/1c]

  11. ‘ವಚನ ಕಮ್ಮಟ’ – ಪುಸ್ತಕದ ಸಾಂಸ್ಕೃತಿಕ ಮಹತ್ವವನ್ನು ವಿವರಿಸಿ. [2023/20m/4a]

  12. ಅಕ್ಕಮಹಾದೇವಿ ಮತ್ತು ಚೆನ್ನಮಲ್ಲಿಕಾರ್ಜುನನ ಸಂಬಂಧದ ಸ್ವರೂಪವನ್ನು ವಿವರಿಸಿ. [2023/10m/4c]

  13. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಬೆಟ್ಟದ ಮೇಲೊಂದು ಮನೆಯ ಮಾಡಿ
    ಮೃಗಗಳಿಗಂಜಿದೊಡೆಂತಯ್ಯ?
    ಸಮುದ್ರದ ತಡಿಯಲೊಂದು ಮನೆಯ ಮಾಡಿ
    ನೆರೆತೊರೆಗಳಿಗಂಜಿದೊಡೆಂತಯ್ಯ?
    ಸಂತೆಯೊಳಗೊಂದು ಮನೆಯ ಮಾಡಿ
    ಶಬ್ದಕ್ಕೆ ನಾಚಿದೊಡೆಂತಯ್ಯ?
    ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯ
    ಲೋಕದೊಳಗೆ ಹುಟ್ಟಿದ ಬಳಿಕ
    ಸ್ತುತಿನಿಂದೆಗಳು ಬಂದರೆ
    ಮನದಲ್ಲಿ ಕೋಪವತಾಳದೆ ಸಮಾಧಾನಿಯಾಗಿರಬೇಕು. [2022/10m/1b]

  14. ಧರ್ಮದ ಮುಖೇನ ಸಾಮಾಜಿಕ ಸಮಾನತೆಯನ್ನು ವಚನಕಾರರು ಹೇಗೆ ಪ್ರತಿಪಾದಿಸಿದರು? ವಚನಗಳ ಆಧಾರದಲ್ಲಿ ಚರ್ಚಿಸಿರಿ. [2022/20m/3a]

  15. ಕೆಳವರ್ಗದ ವಚನಕಾರರ ಸಂವೇದನೆ, ವಸ್ತು-ವಿಷಯ ಮತ್ತು ಶೈಲಿಗಳು ಉಳಿದ ವಚನಕಾರರಿಗಿಂತ ಭಿನ್ನವಾಗಿವೆ – ಚರ್ಚಿಸಿರಿ. [2022/20m/4a]

  16. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ನುಡಿದರೆ ಮುತ್ತಿನ ಹಾರದಂತಿರಬೇಕು,
    ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,
    ನುಡಿದರ ಸ್ಫಟಿಕದ ಶಲಾಕೆಯಂತಿರಬೇಕು,
    ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ ಕೂಡಲಸಂಗಮದೇವ ॥ [2021/10m/1b]

  17. ಅಕ್ಕನ ವಚನಗಳ ಕಾವ್ಯಮೌಲ್ಯಗಳನ್ನು ಕುರಿತು ಚರ್ಚಿಸಿರಿ. [2021/10m/4c]

  18. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಹಾಲ ನೇಮ, ಹಾಲಕೆನೆಯ ನೇಮ,
    ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ,
    ಬೆಣ್ಣೆಯ ನೇಮ, ಬೆಲ್ಲದ ನೇಮ ।
    ಅಂಬಲಿಯ ನೇಮದವರನಾರನೂ ಕಾಣೆ,
    ಕೂಡಲಸಂಗನ ಶರಣರಲ್ಲಿ –
    ಅಂಬಲಿಯ ನೇಮದಾತ ಮಾದರ ಚೆನ್ನಯ್ಯ ॥ [2020/10m/1e]

  19. ವಚನಗಳಲ್ಲಿ ಕಂಡುಬರುವ ಅನುಭವ ಮತ್ತು ಅನುಭಾವಗಳ ಸ್ವರೂಪದ ಕುರಿತು ಚರ್ಚಿಸಿ. [2020/10m/3c]

  20. ಶರಣರ ಭಕ್ತಿ ಮತ್ತು ಸಾಮಾಜಿಕರ ಭಕ್ತಿಯ ಅಂತರಗಳನ್ನು ವಚನ ಸಾಹಿತ್ಯರ ಹಿನ್ನೆಲೆಯಲ್ಲಿ ಗುರುತಿಸಿ. [2020/10m/4c]

  21. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ನೆಲದ ಮರೆಯ ನಿದಾನದಂತೆ,
    ಮುಗಿಲ ಮರೆಯಲಡಗಿದ ಮಿಂಚಿನಂತೆ,
    ಬಯಲ ಮರೆಯಲಡಗಿದ ಮರೀ ಚಿಯಂತೆ,
    ತಂಗಳೆ ಮರೆಯಲಡಗಿದ ಬೆಳಗಿನಂತೆ,
    ಗುಹೇಶ್ವರ ನಿಮ್ಮ ನಿಲುವು [2019/10m/1b]

  22. ಭಕ್ತಿ ಮತ್ತು ಸಾಮಾಜಿಕ ಚಿಂತನೆ. ಈ ಎರಡೂ ದೃಷ್ಟಿಯಿಂದ ವಚನಕಾರರು ತುಳಿದ ಕ್ರಾಂತಿಕಾರಿ ಹಾದಿಯನ್ನು ಚರ್ಚಿಸಿ, ವಚನಗಳು ಇಂದಿಗೂ ಹೇಗೆ ಪ್ರಸ್ತುತವಾಗಿವೆ ಎಂದು ನಿರೂಪಿಸಿ. [2019/20m/3a]

  23. ತಳ ಸಮುದಾಯಗಳ ಸಂವೇದನೆಯನ್ನು ಹೊಂದಿದ ಅಂಬಿಗರ ಚೌಡಯ್ಯ, ತುರುಗಾಹಿ ರಾಮಣ್ಣ, ಥಕ್ಕೆಯ ಬೊಮ್ಮಯ್ಯ, ಮಾದಾರ ಚೆನ್ನಯ್ಯ ಮೊದಲಾದವರ ವಚನಗಳ ವೈಶಿಷ್ಟ್ಯಗಳನ್ನು ಚರ್ಚಿಸಿ. [2019/20m/4a]

  24. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಒಡಲುಗೊಂಡವ ಹಸಿವ
    ಒಡಲುಗೊಂಡವ ಹುಸಿವ
    ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರಾ !
    ನೀನೆನ್ನಂ ತೊಮ್ಮೆ ಒಡಲುಗೊಂಡು ನೋಡಾ ರಾಮನಾಥ ! [2018/10m/1b]

  25. ಅಕ್ಕಮಹಾದೇವಿ ಮತ್ತು ಚೆನ್ನಮಲ್ಲಿಕಾರ್ಜುನನ ಸಂಬಂಧದ ಸ್ವರೂಪವನ್ನು ವಿವರಿಸಿ. [2018/10m/2c]

  26. ‘ವಚನ ಕಮ್ಮಟ’ ಕೃತಿಯ ಹಿನ್ನೆಲೆಯಲ್ಲಿ ವಚನಗಳ ಸಾಹಿತ್ಯಕ ಮತ್ತು ಸಾಮಾಜಿಕ ಸ್ವರೂಪಗಳನ್ನು ವಿಶದೀಕರಿಸಿ. [2018/20m/4b]

  27. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾಗ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ) ಹಾಲತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು
    ತವರಾಜದ ನೊರೆ ತೆರೆಯಂತೆ ಆದ್ಯರ ವರ್ಚವಿರಲು
    ಬೇರೆ ಬಾವಿಯ ತೊಡಿ, ಉಪ್ಪು ನೀರನುಂಬುವನ ವಿಧಿಯಂತೆ
    ಆಯಿತ್ತೆನ್ನ ಮತಿ ಕೂಡಲ ಸಂಗಮದೇವಾ. [2017/10m/1d]

  28. ಭಕ್ತಿಯಸ್ವರೂಪಕ್ಕೆ ವಚನಕಾರರು ಕೊಟ್ಟ ಹೊಸ ಆಯಾಮಗಳನ್ನು ನಿಮಗೆ ಇಟ್ಟಿರುವ ವಚನಕಾರರ ಹಿನ್ನೆಲೆಯಲ್ಲಿ ವಿಶದೀಕರಿಸಿ. [2017/20m/3a]

  29. ಅಲ್ಲಮನ ವಚನಗಳಲ್ಲಿ ಕಂಡುಬರುವ ಆಧ್ಯಾತ್ಮಿಕ ಸ್ವರೂಪವನ್ನು ತೌಲನಿಕವಾಗಿ ವಿಶ್ಲೇಷಿಸಿ. [2017/20m/4b]

  30. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದು 150 ಪದಗಳ ಮೇಲೆ) ರಾತ್ರಿಯೆಂಬ ಹುತ್ತಿನೊಳಗೆ ನಿದ್ರೆಯೆಂಬ ರಾಹು ಹೆಡೆಯೆತ್ತಿ
    ಕತ್ತಲೊಡನೆ ಅಂಜನಾಸಿದ್ಧರ ಅಂಜನವು ಹಾರಿತ್ತು
    ಘಟಿಕಾಸಿದ್ದರ ಘಟಿಕೆಯುರುಳಿತ್ತು
    ಯಂತ್ರಗಳ ಯಂತ್ರ ಎದ್ದು ಹೋಯಿತ್ತು
    ಔಷದಿಗಳ ಔಷದವನಾರಡಿಕೊಂಡಿತ್ತು
    ಸರ್ವ ವಿದ್ಯಾ ಮುಖದ ಜ್ಯೋತಿನಂದಿತ್ತು
    ಈ ವಿಷಯದ ಲಹರಿಯಲ್ಲಿ ಮೂರು ಲೋಕದವರೆಲ್ಲರೂ
    ಮೂರ್ಛಿತರಾದರು ಕಾಣಾ ಗುಹೇಶ್ವರಾ ।। [2016/10m/1b]

  31. ನಡುಗನ್ನಡ ಸಾಹಿತ್ಯದ ವೈಚಾರಿಕ ಆಕೃತಿಗಳಾದ ವಚನಗಳು ಮಾನವೀಯತೆಯತ್ತ ನಡೆವ ನಡೆಯನ್ನು ವಿಶದೀಕರಿಸಿ. [2016/10m/2c]

  32. ಜೀವದೇಹದ ನಡುವಿನ ಸಂಬಂಧ ವಚನಗಳಲ್ಲಿ ನಿರ್ವಹಣೆಗೊಂಡಿರುವ ಬಗೆಯನ್ನು ಸೋದಾಹರಣವಾಗಿ ವಿವರಿಸಿ. [2016/20m/4b]

  33. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (150 ಪದಗಳ ಉತ್ತರ ಮಿತಿ): ಲೋಕದ ಡೊಂಕು ನೀವೇಕೆ ತಿದ್ದುವಿರಿ
    ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
    ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
    ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
    ಕೂಡಲ ಸಂಗಮದೇವ. [2015/10m/1e]

  34. ಶಿವಶರಣರ ಆಧ್ಯಾತ್ಮಿಕ ಸಾಧನೆ, ವಚನಗಳಲ್ಲಿ ಹೇಗೆ ವ್ಯಕ್ತವಾಗಿದೆ? ವಿವರಿಸಿರಿ. [2015/20m/2b]

  35. ಸಮಾಜ ಸುಧಾರಣೆಗೆ ಭಕ್ತಿ ಹೇಗೆ ಸಮರ್ಥ ಸಾಧನವಾಗಿದೆಯೆಂಬುದನ್ನು ವಚನಕಾರರ ಹಿನ್ನೆಲೆಯಲ್ಲಿ ಚರ್ಚಿಸಿರಿ. [2015/10m/4c]

  36. ಅಕ್ಕನ ವಚನಗಳಲ್ಲಿ ಕಾಣುವ ಪ್ರಮುಖವಾದ ಆಶಯವು, ಆ ಕಾಲದ ಉಳಿದ ವಚನಕಾರ್ತಿಯರ ಆಶಯಗಳಿಗಿಂತ ಹೇಗೆ ಭಿನ್ನವಾಗಿದೆ? ನಿಮಗೆ ಇಟ್ಟಿರುವ ವಚನಗಳ ಹಿನ್ನೆಲೆಯಲ್ಲಿ ಚರ್ಚಿಸಿ. [2014/20m/3a]

  37. ಅಲ್ಲಮಪ್ರಭುಗಳ ತಾತ್ವಿಕ ನೆಲೆಗಳನ್ನು ವಚನಗಳ ಹಿನ್ನೆಲೆಯಲ್ಲಿ ಚರ್ಚಿಸಿರಿ. [2014/20m/4b]

  38. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (ಪ್ರತಿಯೊಂದೂ 125 ಪದಗಳ ಮಿತಿಯಲ್ಲಿ ಇರಲಿ) ನಾನು ನಿಮ್ಮವಳಲ್ಲವಯ್ಯಾ, ನಾನು ಅನಿಮಿಷನವರವಳು.
    ನಾನು ನಿಮ್ಮವಳಲ್ಲವಯ್ಯಾ, ನಾನು ಅಜಗಣ್ಣನವರವಳು.
    ನಾನು ನಿಮ್ಮವಳಲ್ಲವಯ್ಯಾ, ನಾನು ಪ್ರಭುವಿನ ಸಂತತಿಯವಳು.
    ನಾನು ನಿಮ್ಮವಳಲ್ಲವಯ್ಯಾ, ನಾನು ಮಾದಾರ ಚೆನ್ನಯ್ಯನ ಮೊಮ್ಮಗಳು.
    ನಾನು ನಿಮ್ಮವಳಲ್ಲವಯ್ಯಾ, ನಾನು ಪ್ರಸಾದಿಗಳ ಮನೆಯ ಕೀಳುದೊತ್ತು
    ನಾನು ನಿಮ್ಮವಳಲ್ಲವಯ್ಯಾ, ಸಂಗಯ್ಯ
    ನಾನು ಬಸವಯ್ಯನ ಮನೆಯ ತೊತ್ತಿನ ಮಗಳು. [2013/10m/1b]

  39. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (ಪ್ರತಿಯೊಂದೂ 125 ಪದಗಳ ಮಿತಿಯಲ್ಲಿ ಇರಲಿ) ರೇಖೆ ರೇಖೆ ಕೂಡಿದಲ್ಲಿ ಅಕ್ಷರವಾದವು
    ಅಕ್ಷರಾಕ್ಷರ ಕೂಡಿದಲ್ಲಿ ಶಬ್ದವಾಯಿತ್ತು
    ಶಬ್ದ ಶಬ್ದ ಕೂಡಿದಲ್ಲಿ ಗ್ರಂಥಾನ್ವಯವಾಯಿತ್ತು
    ಅಕ್ಷರದಲ್ಲಿಲ್ಲ; ಶಬ್ದದಲ್ಲಿಲ್ಲ; ಗ್ರಂಥಾನ್ವಯದಲ್ಲಿಲ್ಲ
    ಏನೆಂಬುದಿಲ್ಲ, ಮೊದಲೆ ಇಲ್ಲ.
    ಇಲ್ಲೆಂಬುವ ಅಹುದೆಂಬುವ ಉಭಯಶಬ್ದಕ್ಕೆ ಲೋಪವಿಲ್ಲನೋಡಾ.
    ಕಪಿಲಸಿದ್ಧ ಮಲ್ಲಿಕಾರ್ಜುನ ಮಹಿಮನು. [2013/10m/1e]

  40. ದೇವರ ದಾಸಿಮಯ್ಯನ ವಚನಗಳಲ್ಲಿ ಕಂಡುಬರುವ ವ್ಯಕ್ತಿತ್ವದ ಆಧ್ಯಾತ್ಮಿಕ ಸ್ವರೂಪವನ್ನು ವಿವರಿಸಿ. (125 ಪದಗಳು) [2013/10m/3c]

  41. ಅಕ್ಕಮಹಾದೇವಿಯ ವಚನಗಳಲ್ಲಿ ಕಾಣುವ ರೂಪಕಗಳ ವೈಶಿಷ್ಟ್ಯವನ್ನು ಸೋದಾಹರಣವಾಗಿ ವಿವರಿಸಿ. (250 ಪದಗಳು) [2013/20m/4b]

  42. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: ಹಬ್ಬಕ್ಕೆ ತಂದ ಹರಕೆಯ ಕುರಿ
    ತೊರಣಕ್ಕೆ ತಂದ ತಳಿರ ಮೇಯಿತ್ತು
    ಕೊಂದಹರೆಂಬುದನರಿಯದೆ
    ಬೆಂದೊಡಲ ಹೊರೆಯ ಹೋಯಿತ್ತು
    ಅಂದಂದೆ ಹುಟ್ಟಿತ್ತು ಅಂದಂದೆ ಹೊಂದಿತ್ತು
    ಕೊಂದವರುಳಿದರೆ ಕೂಡಲಸಂಗಮದೇವಾ? [2012/12m/1b]

  43. ನೀವು ಓದಿರುವ ಪಠ್ಯಭಾಗದಲ್ಲಿ ಬಸವಣ್ಣನವರ ಭಕ್ತಿ ವಿಷಯಕವಾದ ವಿಚಾರಗಳನ್ನು ನಿರೂಪಿಸಿ. [2012/30m/4a]

  44. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯಗಳನ್ನು ಕುರಿತು ಬರೆಯಿರಿ: ಬೆಟ್ಟದ ಮೇಲೊಂದು ಮನೆಯಮಾಡಿ
    ಮೃಗಗಳಿಗಂಜಿದೊಡೆಂತಯ್ಯ?
    ಸಮುದ್ರದ ತಡಿಯಲೊಂದು ಮನೆಯ ಮಾಡಿ
    ನೊರೆತೆರೆಗಳಿಗೆ ಅಂಜಿದೊಡೆಂತಯ್ಯ?
    ಸಂತೆಯೊಳಗೊಂದು ಮನೆಯ ಮಾಡಿ
    ಶಬ್ದಕ್ಕೆ ನಾಚಿದೊಡೆಂತಯ್ಯ?
    ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯ
    ಲೋಕದೊಳಗೆ ಹುಟ್ಟಿದ ಬಳಿಕ
    ಸ್ತುತಿನಿಂದೆಗಳು ಬಂದರೆ
    ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು ! [2011/20m/1b]

  45. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯಗಳನ್ನು ಕುರಿತು ಬರೆಯಿರಿ: ಕೊಟ್ಟ ಕುದುರೆಯನೇರಲರಿಯದೆ
    ಮತ್ತೊಂದು ಕುದುರೆಯನೇರ ಬಯಸುವವರು,
    ವೀರರೂ ಅಲ್ಲ, ಧೀರರೂ ಅಲ್ಲ ಇದು ಕಾರಣ –
    ನೆರೆ ಮೂರು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು,
    ತೊಳಲುತ್ತ ಇದ್ದಾರೆ
    ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು? [2010/20m/1b]

  46. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯಗಳನ್ನು ಕುರಿತು ಬರೆಯಿರಿ: ಕಿಚ್ಚಿಲ್ಲದ ಬೇಗೆಯಲಿ ಬೆಂದೆನವ್ವಾ ।
    ಏರಿಲ್ಲದ ಗಾಯದಲಿ ನೊಂದೆನವ್ವಾ ।
    ಸುಖವಿಲ್ಲದೆ ಧಾವತಿ ಗೊಂಡೆನವ್ವಾ ।
    ಚೆನ್ನಮಲ್ಲಿಕಾರ್ಜುನ ದೇವರಿಗೊಲಿದು
    ಬಾರದ ಭವಂಗಳಲಿ ಬಂದೆನವ್ವಾ. [2009/20m/1c]

Cover of the UPSC Prelims Topic-wise PYQ book with detailed explanations

From the Optional Province team

Preparing for Prelims too?

Our UPSC Prelims Topic-wise PYQ Book covers every Prelims question with detailed explanations, so you can see exactly where UPSC asks from. Now available as a hard copy and an eBook.

Buy Hard Copy on AmazonBuy eBook (PDF)

Download a free sample

2.2] ‘ಜನಪ್ರಿಯ ಕನಕಸಂಪುಟ’

33 questions

  1. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಸತ್ಯಧರ್ಮಗಳ ನಿತ್ಯವು ಬೋಧಿಸೆ
    ತೊತ್ತಿನ ಮನಸಿಗೆ ಸೊಗಸೀತೆ
    ತತ್ವದ ಅರ್ಥವ ವಿಚಿತ್ರದಿ ಪೇಳೆ
    ಕತ್ತೆಯ ಚಿತ್ತಕೆ ಹತ್ತೀತೆ
    ಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿ
    ಮುತ್ತು ಕೊಟ್ಟರೆ ಮಾತನಾಡೀತೆ
    ಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ
    ಅರ್ಥಿಯ ತೋರದೆ ಇದ್ದೀತೆ [2026/10m/1c]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಸಮಾನತೆಯ ಪರಿಕಲ್ಪನೆ ಹೇಗೆ ಬಿಂಬಿತವಾಗಿದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿಮರ್ಶಿಸಿ. [2026/10m/3c]

  3. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನಕದಾಸರ ಕೀರ್ತನೆಗಳಲ್ಲಿ ಬಿಂಬಿತವಾಗಿರುವ ಭಾವಗಳನ್ನು, ನೋವುಗಳನ್ನು ವಿವರಿಸಿ. [2026/10m/4c]

  4. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನಕದಾಸರ ಸಮಾಜದ ಕಳಕಳಿಯನ್ನು ಕನಕ ಸಾಹಿತ್ಯದ ಹಿನ್ನೆಲೆಯಲ್ಲಿ ವಿವರಿಸಿ. [2025/20m/3b]

  5. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ದಾಸಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡ ಧೋರಣೆಗಳನ್ನು ನಿದರ್ಶನಗಳೊಂದಿಗೆ ಪರಾಮರ್ಶಿಸಿ. [2024/20m/3b]

  6. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಿರಲಿ) ಕನಕದಾಸರ ಕೀರ್ತನೆಗಳ ತಾತ್ವಿಕ ಚಿಂತನೆ [2024/10m/5a]

  7. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
    ಅಟ್ಟು ಉಣ್ಣದ ವಸ್ತುಗಳಿಲ್ಲ
    ಗುಟ್ಟು ಕಾಣಿಸೆಬಂತು ಹಿರಿದೇನು ಕಿರಿದೇನು
    ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ॥ [2023/10m/1d]

  8. ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ವಿಷಮತೆಗಳ ಪ್ರಶ್ನೆ ಹೇಗೆ ಕಂಡು ಬರುತ್ತದೆ? ವಿವರಿಸಿ. [2023/20m/3b]

  9. ಭಕ್ತಿ ಮತ್ತು ವೈಚಾರಿಕತೆ ಕನಕದಾಸರ ಕೃತಿಗಳಲ್ಲಿ ಹೇಗೆ ಮೈದಾಳಿದೆ? ಪರಿಶೀಲಿಸಿರಿ. [2022/20m/3b]

  10. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಮಂಡೆ ಬೋಳು ಮಾಡಿ ನಾಮ
    ದುಂಡೆಯನ್ನು ಬರೆದು ಕೆಡಿಸಿ
    ಕಂಡ ಕಂಡವರನು ಕಾಡಿ
    ಬಂಡ ಜನ್ಮ ಹೊರೆಯುವವಗೆ
    ದಾಸ ಪಟ್ಟವೋ ಸಂನ್ಯಾಸ ಪಟ್ಟವೋ
    ಆಸಯಿಂದ ನೆಲೆಯಾದಿ ಕೇಶವನ್ನು ನೆನೆಯದವಗೆ ॥ [2021/10m/1d]

  11. ಕನಕದಾಸರ ಕೀರ್ತನೆಗಳಲ್ಲಿ ಜಾತಿ ಭೇದದ ಕುರಿತಾದ ಜಿಜ್ಞಾಸೆಯು ಹೇಗೆ ಮಾಡಿಬಂದಿದೆ? ಚರ್ಚಿಸಿ. [2021/20m/3b]

  12. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಜಲವೆ ಸಕಲಕುಲಕ್ಕೆ ತಾಯಲ್ಲವೆ
    ಜಲದ ಕುಲವನೇನಾದರು ಬಲ್ಲಿರ
    ಜಲದ ಬೊಬ್ಬುಳಯಂತೆ ಸ್ಥಿರವಲ್ಲವೀ ದೇಹ
    ನೆಲೆಯನರಿತು ನೀ ನೆನೆಕಂಡ್ಯ ಮನುಜ ॥ [2020/10m/1d]

  13. ಕನಕದಾಸರ ಕೀರ್ತನೆಗಳು ಸಾರುವ ಧರ್ಮ ಮತ್ತು ಸಮಾಜಧರ್ಮಗಳ ಕುರಿತಂತೆ ವಿಶ್ಲೇಷಿಸಿ. [2020/20m/3a]

  14. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
    ಅಟ್ಟು ಉಣ್ಣದ ವಸ್ತುಗಳಿಲ್ಲ
    ಗುಟ್ಟು ಕಾಣಿಸ ಬಂತು ಹಿರಿದೇನು ಕಿರಿದೇನು
    ನೆಟ್ಟನೆ ಸರ್ವಜ್ಞನ ನೆನೆಕಂಡ್ಯಾ ಮನುಜ ।। [2019/10m/1c]

  15. ಕಂದಾಚಾರ, ಢಾಂಭಿಕತೆ ಮತ್ತು ಸಾಮಾಜಿಕ ವಿಷಮತೆಗಳನ್ನು ಪ್ರಶ್ನಿಸಿದ ಕನಕದಾಸರು ಉನ್ನತ ನೈತಿಕ ಮೌಲ್ಯಗಳನ್ನು ತಮ್ಮ ಕೃತಿಗಳಲ್ಲಿ ಹೇಗೆ ಎತ್ತಿ ಹಿಡಿದರು ಎಂದು ವಿವರಿಸಿ. [2019/20m/3b]

  16. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಸವಿಯು ಸಕ್ಕರೆಯೊಳಗೋ ಸಕ್ಕರೆಯು ಸವಿಯೊಳಗೋ
    ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೋ
    ಜಿಹ್ವೆ ಮನಸಿನ ಒಳಗೋ ಮನಸು ಜಿಹ್ವೆಯ ಒಳಗೋ
    ಜಿಹ್ವೆ ಮನಸುಗಳೆರಡು ನಿನ್ನೊಳಗೋ ಅರಿಯೆ [2018/10m/1c]

  17. ಕನಕದಾಸರ ಕೀರ್ತನೆಗಳಲ್ಲಿ ಅಭಿವ್ಯಕ್ತವಾಗಿರುವ ತಾತ್ತ್ವಿಕ ಚಿಂತನೆಗಳನ್ನು ವಿವರಿಸಿ. [2018/10m/3c]

  18. ಕನಕದಾಸರ ಕೀರ್ತನೆಗಳಲ್ಲಿ ವ್ಯಕ್ತವಾಗುವ ಸಾಮಾಜಿಕ ಸಮಾನತೆಯ ಪರಿಕಲ್ಪನೆಯನ್ನು ವಿವರಿಸಿ. [2018/10m/4c]

  19. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾಗ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ) ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ
    ಕಣಕ ಕುಟ್ಟೋ ಒನಕಿಲಿ ಹೊಡೆದರೆ ಕುಯ್ ಕುಯ್ ರಾಗವ ಮಾಡುವಿರಿ
    ಹುಗ್ಗಿ ಮಾಡೋ ಆಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡುವಿರಿ
    ಹುಗ್ಗಿ ಮಾಡೋ ಸೌಟಲಿ ಹೊಡೆದರೆ ಕುಯ್ ಕುಯ್ ರಾಗವ ಮಾಡುವಿರಿ
    ಹಿರಿಯ ಹಾದಿಲಿ ಓಡುವಿರಿ ಕರಿಯ ಬೂದಿಲಿ ಹೊರಳುವಿರಿ
    ಸಿರಿ ಕಾಗಿನೆಲೆಯಾದಿಕೇಶವನ ಸ್ಮರಿಸದವರ ಗತಿ ತೋರುವಿರಿ. [2017/10m/1e]

  20. ಕನಕ ದಾಸರ ಕೀರ್ತನೆಗಳಲ್ಲಿ ಕಂಡುಬರುವ ಸಾಮಾಜಿಕ ಆಯಾಮಗಳನ್ನು ಸೋದಾಹರಣವಾಗಿ ಚರ್ಚಿಸಿ. [2017/20m/3b]

  21. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದು 150 ಪದಗಳ ಮೇಲೆ) ಒಂಬತ್ತು ಎಜ್ಜದೊಳೊಸರುವ ಹೊಲಸದು
    ತುಂಬಿ ತುಳುಕುವ ಕೊಡವಾಗಿರಲು
    ಇಂಬಿಲ್ಲದೆ ಹೊಲೆಗೊಂಡ ಕಾವಿನಲಿ ಬಂದಂಥ
    ಡಂಬಕ ನನನಿನ್ಯಾತರ ಕುಲವಯ್ಯ । [2016/10m/1d]

  22. ಜನಸಮ್ಮುಖ ಸಾಹಿತ್ಯದ ಲಕ್ಷಣಗಳನ್ನು ಕನಕದಾಸರ ಕೀರ್ತನೆಗಳ ಹಿನ್ನೆಲೆಯಲ್ಲಿ ಪರಾಮರ್ಶಿಸಿ. [2016/20m/3a]

  23. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (150 ಪದಗಳ ಉತ್ತರ ಮಿತಿ): ಅಡವಿಯೊಳಗಾಡುವ ಮೃಗ ಜಾತಿ ಪಕ್ಷಿಗಳಿಗೆಲ್ಲ
    ಅಡಿಗಡಿಗೆ ಆಹಾರ ವಿತ್ತವರು ಯಾರೊ
    ಪಡೆದ ಜನನಿಯ ತೆರದೆ ಸ್ವಾಮಿ ಹೊಣೆಗೀಡಾಗಿ
    ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ. [2015/10m/1d]

  24. ಇತರ ದಾಸರುಗಳಿಂದ ಕನಕದಾಸ ಹೇಗೆ ಭಿನ್ನವಾಗಿ ಸಾಹಿತ್ಯ ಕೃಷಿ ಮಾಡಿದ್ದಾನೆ? ವಿವರಿಸಿರಿ. [2015/10m/3c]

  25. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ): ಹಣ್ಣು ಕೊಂಬುವ ಬನ್ನಿರಿ – ಹರಿದಾಸರು
    ಹಣ್ಣು ಕೊಂಬುವ ಬನ್ನಿರಿ
    ತುರುವ ಕಾಯ್ದ ಹಣ್ಣು ಉರಗನ ತುಳಿದ ಹಣ್ಣು
    ಕರೆದರೆ ಕಂಬದೊಳು ಓಯೆಂಬ ಹಣ್ಣು
    ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು
    ಕರುಣಾಳು ಕಾಗಿನೆಲೆಯಾದಿಕೇಶವ ಹಣ್ಣು. [2014/10m/1d]

  26. ಕನಕದಾಸರ ಕೀರ್ತನೆಗಳಲ್ಲಿ ಪ್ರತಿರೋಧದ ಅಂಶವು ಪ್ರಕಟಗೊಂಡಿರುವ ಬಗೆಗಳನ್ನು ವಿವರಿಸಿ. [2014/10m/3c]

  27. ಕನಕದಾಸರ ಕೀರ್ತನೆಗಳಲ್ಲಿ ಕಂಡುಬರುವ ಭಕ್ತಿಯ ಸ್ವರೂಪವನ್ನು ಸೋದಾಹರಣವಾಗಿ ವಿಶ್ಲೇಷಿಸಿ. (250 ಪದಗಳು) [2013/20m/3a]

  28. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: ಸಾಕು ಸಾಕು ಮನುಜಸೇವೆಯು ರಂಗಯ್ಯ ಇನ್ನು…
    ಸ್ನಾನ ಮೌನ ನಿತ್ಯ ಸಂಧ್ಯಾನೇಮಗಳನೆ ತೊರೆದು
    ಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿ
    ಸ್ವಾನನಂತೆ ದಿನವ ಕಳೆವೆನೊ । ದುರಾಸೆಯನ್ನು
    ಮನದಲಿಟ್ಟುಕೊಂಡು ಕುದಿವೆನೊ । ಕೊನೆಗೂ ಎಳ್ಳುಕಾ
    ಳಿನಷ್ಟು ಸುಖವ ಕಾಣೆನೊ । ರಂಗಯ್ಯ ರಂಗ … ಸಾಕು ಸಾಕು … [2012/12m/1d]

  29. ಕನಕದಾಸರ ಕೀರ್ತನೆಗಳಲ್ಲಿ ಕಂಡುಬರುವ ಸಾಮಾಜಿಕ ವಿಚಾರಗಳನ್ನು ವಿವರಿಸಿ. [2012/30m/3b]

  30. ಕನಕದಾಸರ ಕೀರ್ತನೆಗಳಲ್ಲಿ ಕಂಡುಬರುವ ಕಾವ್ಯಗುಣವನ್ನು ಉದಾಹರಣೆಗಳೊಂದಿಗೆ ವಿವರಿಸಿ. [2011/30m/4a]

  31. ಕನಕದಾಸರ ಕೃತಿಗಳು ಮಂಡಿಸುವ ಸಾಮಾಜಿಕ ನೆಲೆಗಳನ್ನು ಚರ್ಚಿಸಿರಿ. [2011/30m/4b]

  32. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯಗಳನ್ನು ಕುರಿತು ಬರೆಯಿರಿ: ಏನು ಬರುವುದೋ ಸಂಗ/ಡೇನು ಬರುವುದೋ
    ದಾನ ಧರ್ಮ ಮಾಡಿ ಬಹು ನಿ/ಧಾನಿ ಎನಿಸಿಕೊಳ್ಳು
    ಮನುಜ ।ಪ।
    ಎನ್ನದೆಂದು ತನ್ನದೆಂದು ಹೊನ್ನು ಹೆಣ್ಣು ಮಣ್ಣಿಗಾಗಿ
    ಘನ್ನವಾಗಿ ಬಾಯ ಬಿಡುತ ಬಂದೆ ಮೋಹನಾ
    ಸನ್ನುತದಲ್ಲಿ ಪರಹಿತಾರ್ಥ ಮಾಡಿ
    ಪುಣ್ಯ ಪಡೆಯಿನಿತು ಮುಂದೆ ಕಿರುಕುಳದ ಕೂಪದಲ್ಲಿ
    ಕೆಡಲು ಬೇಡ ಮನುಜ ।। [2010/20m/1d]

  33. ಕನಕದಾಸರ ರಾಮಧಾನ್ಯ ಚರಿತೆಯಲ್ಲಿಯ ಶಿಷ್ಟ-ಜಾನಪದಗಳ ಚರ್ಚೆಯನ್ನು ನಿರೂಪಿಸಿರಿ. [2010/60m/4]

2.3] ಹರಿಹರ

24 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: “ಮಾಡಿ ತೆಲ್ಲಂ ಪೂಜೆಯಾಗಿ, ಆಡಿ ತೆಲ್ಲಂ ಸ್ತುತಿಯಾಗಿ” – ಎಂಬ ಮಾತು ನಂಬಿಯಣ್ಣನ ಜೀವನದಲ್ಲಿ ಉಂಟುಮಾಡಿದ ಪರಿಣಾಮಗಳನ್ನು ವಿವರಿಸಿ. [2026/20m/3b]

  2. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಗಗನದೊಳು ನಿಂದು ನೋಡು ನೋಡು ಪಾರ್ವತಿ ನಿನ್ನ ಪರವೆಯ
    ರೂಪುಮನೆನ್ನ ನಂಬಿಯಣ್ಣನ ವಿಳಾಸಮಂ ಇವರಿರ್ವರ ಸುಖದೋ-
    -ಚೆಯನೀ ಜಗತ್ರಯಂ ಮೆಚ್ಚೆ ಪೂಜೆಯಾಗಿ ಕೈಕೊಂಡಪೆಂ
    ಇವರಿರ್ವರ ಸುಖನಿಮಿತ್ತವಾನುಂ ನೀನುವಿನಿತು ಬೇಗಂ
    ಬಿಯ್ಯಗರಾಗಿರ್ಪೆವೆಂದು ವಿನೋದದಿಂ ಮೃಡಂ ನುಡಿವುತ್ತಿರೆ. [2025/10m/1b]

  3. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕಾಳಿದಾಸನ ಮನೆಯ ಕೀಳುದಾಸ ನಾನಯ್ಯ
    ಆಳು ದಾಸನು ನಾನು ಮೂಳ ದಾಸ
    ಫಾಲಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯ
    ಆಳಿನಾಳಿನ ದಾಸ ನಿಡಿದಾಸ ನಾನಯ್ಯ ।। [2025/10m/1c]

  4. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಹರಿಹರನ ರಗಳೆಗಳಲ್ಲಿ ನಂಬಿಯಣ್ಣನ ರಗಳೆ ವಿಶಿಷ್ಟವಾದುದು ಎಂದು ವಿದ್ವಾಂಸರು ಹೇಳಲು ಕಾರಣವೇನು? [2025/20m/4a]

  5. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಶೃಂಗಾರ ಮತ್ತು ಭಕ್ತಿಯ ವಿವಿಧ ಸ್ವರೂಪಗಳು ಹರಿಹರನ ನಂಬಿಯಾಣ್ಣನ ರಗಳೆಯಲ್ಲಿ ನಿರೂಪಿತ ವಾಗಿರುವ ಬಗೆಯನ್ನು ವಿಶ್ಲೇಷಿಸಿ. [2024/20m/3a]

  6. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಒಂದು ಬನಮಂ ಪೊಕ್ಕು ಮಿಕ್ಕ ಸಂತೋಷದಿಂ
    ಮುಂದೆ ಸಿಂಹಾಸನವನಿಕ್ಕಲು ವಿಲಾಸದಿಂ।
    ದೆಸೆಯ ಕುಳ್ಳಿರ್ದನಾ ಸುಕುಮಾರ ಸೌದರಂ
    ವಸುಧೆಗೊಪ್ಪುವ ಮರ್ತ್ಯ ಮಂಡಲ ಪುರಂದರಂ॥ [2023/10m/1b]

  7. ನಂಬಿಯಣ್ಣನ ರಗಳೆಯಲ್ಲಿ ಶೃಂಗಾರ ಮತ್ತು ವೈರಾಗ್ಯವನ್ನು ಸದುಪಾಕಗೊಳಿಸಿದ ಕವಿಯ ಮರ್ಮವನ್ನು ವಿಶ್ಲೇಷಿಸಿ. [2023/20m/3a]

  8. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ನಡು ನೀರ ನಡುವಿಂದೆ ಗಳಗಳನೆ ನಡೆತಂದು
    ಮಂದೆ ನಿಂದಿರೆ ಕಂಡು ಭಕ್ತ ಸಂಕುಳ ಮೆಲ್ಲ
    ಇಂದು ಶೇಖರನ ಶರಣರ್ಗೆ ಸರಿಯಿನ್ನಿಲ್ಲ
    ಶರಣರ್ಗೆ ಸರಿಯಪ್ಪ ಹರಿಬೊಮ್ಮರೇನುಂಟೆ
    ಶರಣರ್ಗೆ ಸರಿವಪ್ಪ ಸುರಪತಿಗಳೇನುಂಟೆ [2022/10m/1c]

  9. ನಂಬಿಯಣ್ಣನ ಲೌಕಿಕ ಮತ್ತು ಆಧ್ಯಾತ್ಮಿಕ ಬದುಕಿನ ಸಾಧನೆಯನ್ನು ಹರಿಹರ ಚಿತ್ರಿಸಿದ ಬಗೆಯನ್ನು ವಿಶ್ಲೇಷಿಸಿರಿ. [2022/10m/3c]

  10. ನಂಬಿಯಣ್ಣನ ಸಾಂಸಾರಿಕ ಮತ್ತು ಅಧ್ಯಾತ್ಮಿಕ ನೆಲೆಗಳನ್ನು ಹರಿಹರನು ಚಿತ್ರಿಸಿದ ಬಗೆಯನ್ನು ವಿವರಿಸಿ. [2021/10m/2c]

  11. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ನಡೆ ನಿನ್ನ ಮೂಲಪತ್ರವನೆನಗೆ ತೋರೆನುತೆ
    ಇರೆ ತೋರ್ಪೆನೆನ್ನೊಡನೆ ಬಾರಾ ಮಗನೆಯೆಂದು
    ಹರನಲ್ಲಿ ವೃದ್ಧನಂತೊಪ್ಪಿ ನಡೆಗೊಳಲಂದು
    ನಡೆತಂದನಲ್ಲಿ ಕಾಲ್ನಡೆಯೊಳಗೆ ಸೌಂದರಂ ॥ [2020/10m/1b]

  12. ‘ನಂಬಿಯಣ್ಣನ ರಗಳೆ’ ಯಲ್ಲಿ ಶೃಂಗಾರ-ಭಕ್ತಿಗಳ ಸಮ್ಮಿಶ್ರ ಚಿತ್ರವು ಉಜ್ವಲವಾಗಿ ಮೂಡಿ ಬಂದಿದೆ. ಈ ಹೇಳಿಕೆಯನ್ನು ಪರಾಮರ್ಶಿಸಿರಿ. [2020/20m/4a]

  13. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಬಂದು ಬನಮಂ ಪೊಕ್ಕು ಮಿಕ್ಕ ಸಂತೋಷದಿಂ
    ಮುಂದೆ ಸಿಂಹಾಸನವ ನಿಕ್ಕಲು ವಿಲಾಸದಿಂ ।
    ದೆಸೆಯೆ ಕುಳ್ಳಿರ್ದನಾ ಸುಕುಮಾರ ಸೌಂದರಂ
    ವಸುಧೆಗೊಪ್ಪುವ ಮರ್ತ್ಯಮಂಡಲ ಪುರಂದರಂ ।। [2019/10m/1d]

  14. ಹಳೆಗನ್ನಡ ಮತ್ತು ನಡುಗನ್ನಡ ಕಾವ್ಯವೆಲ್ಲವೂ ಭೋಗ-ವೈರಾಗ್ಯ-ಭಕ್ತಿಗಳ ನಾಟ್ಯೀಕರಣವಾಗಿದೆ ಎನ್ನುವ ಮಾತನ್ನು ನಿಮಗಿಟ್ಟಿರುವ ಯಾವುದಾದರೂ ಎರಡು ಕಾವ್ಯಗಳ ಆಧಾರದಲ್ಲಿ ಪರಿಶೀಲಿಸಿ. [2019/10m/2c]

  15. ‘ನಂಬಿಯಣ್ಣನ ರಗಳೆ’ ಕಾವ್ಯಾತ್ಮಕ ಜೀವನ ಚರಿತ್ರೆಯ ಲಕ್ಷಣಗಳನ್ನು ಹೊಂದಿದ ವೈರಾಗ್ಯ ಕಥನ-ವಿವರಿಸಿ. [2019/10m/3c]

  16. ಹರಿಹರನ ‘ನಂಬಿಯಣ್ಣ ರಗಳೆ’ ಯಲ್ಲಿ ಭಕ್ತಿ ಮತ್ತು ಶೃಂಗಾರ ರಸಗಳ ಔನ್ನತ್ಯವನ್ನು ಕುರಿತು ವಿಶ್ಲೇಷಿಸಿ. [2018/20m/3b]

  17. ನಂಬಿಯಣ್ಣನ ರಗಳೆಯಲ್ಲಿ ವ್ಯಕ್ತವಾಗಿರುವ ಭಕ್ತಿಯ ಸ್ವರೂಪ ಎಂತಹದ್ದು? ಇದನ್ನು ಶೃಂಗಾರಕಾವ್ಯವೂ ಹೌದೆನ್ನಬಹುದೆ? ಸೋದಾಹರಣವಾಗಿ ವಿವರಿಸಿ. [2017/20m/4a]

  18. ‘ನಂಬಿಮಣ್ಣನ ರಗಳೆಯೊಂದು ‘ಕಾವ್ಯಾತ್ಮಕ ಚರಿತೆ’ (Poetic biography)’ ಚರ್ಚಿಸಿ. [2016/20m/3b]

  19. ನಂಬಿಯಣ್ಣನ ಶೃಂಗಾರ-ಭಕ್ತಿಗಳ ಸಂಮಿಶ್ರ ಚಿತ್ರಣ ಹರಿಹರನ ರಗಳೆಯಲ್ಲಿ ಹೇಗೆ ಮೂಡಿಬಂದಿದೆ? [2015/20m/3b]

  20. ಹರಿಹರನ ಭಕ್ತಿಯ ಪರಿಕಲ್ಪನೆಗೂ, ಕುಮಾರವ್ಯಾಸನ ಭಕ್ತಿಯ ಪರಿಕಲ್ಪನೆಗೂ ಇರುವ ಸಂಬಂಧಾಂತರಗಳನ್ನು ನಿಮಗಿಟ್ಟಿರುವ ಪಠ್ಯದ ಹಿನ್ನೆಲೆಯಲ್ಲಿ ವಿಶ್ಲೇಷಿಸಿರಿ. [2014/20m/4a]

  21. ಹರಿಹರನ ಕಥನ ತಂತ್ರದ ವೈಶಿಷ್ಟ್ಯವನ್ನು ‘ನಂಬಿಯಣ್ಣನ ರಗಳೆ’ಯ ಹಿನ್ನೆಲೆಯಲ್ಲಿ ಚರ್ಚಿಸಿ. (250 ಪದಗಳು) [2013/20m/4a]

  22. ನಂಬಿಯಣ್ಣನ ರಗಳೆಯಲ್ಲಿಯ ವೃದ್ಧ ಮಾಹೇಶ್ವರ ಪ್ರಸಂಗದ ನಾಟಕೀಯ ಸ್ವಾರಸ್ಯವನ್ನು ವಿವರಿಸಿ, ಅದರ ತಾತ್ತ್ವಿಕ ಅಂಶವನ್ನು ತಿಳಿಸಿ. [2012/30m/2a]

  23. ಹರಿಹರನ ನಂಬಿಯಣ್ಣನ ರಗಳೆಯಲ್ಲಿ ಭಕ್ತ ಮತ್ತು ದೈವದ ನಂಟನ್ನು ಚಿತ್ರಿಸಿರುವ ಬಗೆಯನ್ನು ವಿವರಿಸಿರಿ. [2011/30m/3a]

  24. ನಂದಿಯಣ್ಣನ ರಗಳೆಯಲ್ಲಿ ಶೃಂಗಾರ-ಭಕ್ತಿಗಳ ಸಂಮಿಶ್ರ ಚಿತ್ರಣವು ಪಡೆದಿರುವ ಉನ್ನತಿಯನ್ನು ಚರ್ಚಿಸಿರಿ. [2009/60m/4]

2.4] ಕುಮಾರವ್ಯಾಸ

40 questions

  1. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಸರಳ ಕೊರತೆಯೊ ಸಾರಥಿಯ ಮ
    ತ್ಸರವೊ ರಥದ ವಿಘಾತಿಯೋ ದು
    ರ್ಧರ ಧನುರ್ಭಂಗವೊ ಮಹಾಸ್ತ್ರ ವ್ಯಥೆಯೊ ರವಿಸುತನ
    ಹುರುಳು ಗೆಡಿಸಿದರೆಂತು ರಿಪುರಾ
    ಯರಿಗೆ ನಾವ್ ಗೋಚರವೆ ದುರಿತೋ
    ತ್ಕರುಷವೈಸಲೆ ನಮ್ಮ ಕೆಡಿಸಿತು ಶಿವಶಿವಾ ಎಂದ [2026/10m/1d]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕುಮಾರವ್ಯಾಸ ಭಾರತದ ಕರ್ಣ ಮತ್ತು ಅರ್ಜುನರ ಯುದ್ಧ ಪ್ರಸಂಗದಲ್ಲಿ ಕಂಡು ಬರುವ ಯುದ್ಧ ನೀತಿಯ ಬಗ್ಗೆ ಬರೆಯಿರಿ. [2026/20m/3a]

  3. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕೊಟ್ಟ ಭಾಷೆಗೆ ಮರಳಿ ಬಾಣವ
    ತೊಟ್ಟನೇ ತಾನೊಡೆಯನೆಂದರೆ
    ಯಟ್ಟಿದನೆ ಪಾಂಡವರೊಳನು ಸಂಧಾನವನು ಬಿಸುಟು
    ನಟ್ಟ ಕಣಿಗಳುಕಿದನೆ ಕೌರವ
    ಕೆಟ್ಟನಕಟಕಟೆಂದು ಕಾಯವ
    ಬಿಟ್ಟ ಕರ್ಣನೊಳಾರು ಸರಿಯೆನುತಿರ್ದುದಮರಗಣ ।। [2025/10m/1e]

  4. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕರ್ಣನ ಬದುಕಿನ ಘನತೆಯನ್ನು ಕುಮಾರವ್ಯಾಸನು ಹೇಗೆ ಅನಾವರಣಗೊಳಿಸಿದ್ದಾನೆ? [2025/20m/4b]

  5. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ನೆಲದೊಳರ್ಧವನೀವುದಿಲ್ಲಾ
    ಸ್ಥಳವನೈದನು ಮುನ್ನ ಕೊಡೆನೆ
    ನ್ನಿಳೆಯ ಭಾಗವನೀಸ ಕೊಟ್ಟಡೆ ನಿನ್ನ ಮೇಲಾಣೆ।
    ನೆಲನ ಕಡೆಯಲಿ ಮುಳ್ಳು ಮೊನೆಯು
    ಚ್ಚಳಿಪ ಧರಣಿಯನಿತ್ತನಾದರೆ
    ಬಳಿಕ ನೀನಗು ಹೋಗು ಕದನವ ಕೊಂಡು ಬಾ ಎಂದ।। [2024/10m/1b]

  6. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಕುಮಾರವ್ಯಾಸ ಭಾರತದ ಕರ್ಣ ‘ಒಬ್ಬ ದುರಂತ ನಾಯಕ’ – ಚರ್ಚಿಸಿ. [2024/20m/4a]

  7. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕಾದಿ ಕೊಲುವೊಡೆ ಪಾಂಡುಸುತರು ಸ
    ಹೋದರರು ಕೊಲಲಿಲ್ಲ ಕೊಲ್ಲದೆ
    ಕಾದೆನಾದೊಡೆ ಕೌರವಂಗನಿಯಲಿ ಹೊಗಲಿಲ್ಲ
    ಬೇಧದಲಿ ಹೊಕ್ಕಿರಿದನೋ ಮಧು
    ಸೂದನನು ತಾನಕಟೆನುತ ಘನ ಚಿಂ
    ತೋದಧಿಯಲದ್ವವೊಲು ಮೌನದೊಳಿದ್ದನಾ ಕರ್ಣ [2023/10m/1e]

  8. ‘ಕರ್ಣಪರ್ವ’ ದಲ್ಲಿ ಬರುವ ಕರ್ಣಾರ್ಜುನರ ವಾಗ್ವಾದವನ್ನು ನಿರೂಪಿಸಿ. [2023/20m/4b]

  9. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಅರುಣ ಸಾರಥಿ ಭುವನ ಕಾರ್ಯದ
    ಧುರವ ಹೊರನೆ ಕೃಷ್ಣನಲ್ಲಾ
    ನರನ ಸಾರಥಿಯಾಗನೇ ಪರಕಾರ್ಯದನುವರಿದು
    ಹರನ ಸಾರಥಿ ಕಮಲ ಸಂಭವ
    ಸುರರ ಕಾರ್ಯಕ್ಕೊಡಗದೆ ಸ
    ತ್ಪುರುಷರೇ ಪರಕಾರ್ಯ ನಿಷ್ಠರು ಕೋಪವೇಕೆಂದ [2022/10m/1d]

  10. ಪಂಪ ಮತ್ತು ನಾರಾಣಪ್ಪ ಚಿತ್ರಿಸಿರುವ ಕರ್ಣಪಾತ್ರವು ವ್ಯವಸ್ಥೆಯ ಕರಾಳ ಮುಖಗಳನ್ನು ಅನಾವರಣಗೊಳಿಸಿದೆ. ಈ ಮಾತನ್ನು ಪರಿಶೀಲಿಸಿರಿ. [2022/20m/2a]

  11. ‘ರೂಪಕ ಸಾಮ್ರಾಜ್ಯದ ಚಕ್ರವರ್ತಿ – ಕುಮಾರ ವ್ಯಾಸ’ ಈ ಮಾತನ್ನು ಸಮರ್ಥಿಸಿರಿ. [2022/10m/4c]

  12. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ದ್ಯುಮಣಿ ಕರ್ಣದ್ಯುಮಣಿ ಸಹಿತ
    ಸ್ತಮಿಸೆ ಕಮಲಿನಿ ಕೌರವನ ಮುಖ
    ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕ ತಮದೂಡನೆ ।
    ಅಮಳ ಚಿತ್ರಾಂಗಕ್ಕೆ ಭೂಪೋ
    ತ್ತಮನ ವಿಜಯಾಂಗನೆಗೆ ಅಗಲಿಕೆ
    ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ ॥ [2021/10m/1c]

  13. ಕುಮಾರವ್ಯಾಸನ ರೂಪಕ ನಿರ್ಮಾಣ ಕೌಶಲದ ವೈಶಿಷ್ಟ್ಯವೇನು? ವಿಶದಪಡಿಸಿರಿ. [2021/20m/3a]

  14. “ಕರ್ಣ ಒಂದು ಅಭಿಶಪ್ತ ಪಾತ್ರ” ಎಂಬ ಉಕ್ತಿಯು ಕುಮಾರವ್ಯಾಸನ ಕಾವ್ಯದಲ್ಲಿ ನಿರೂಪಿತವಾದ ಬಗೆಯನ್ನು ವಿವರಿಸಿ. [2021/20m/4b]

  15. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಎಲೆ ಧನಂಜಯ ನೀನು ಹಿಮಕರ
    ಕುಲದ ಸುಕುಮಾರಕನು ಲೋಕದ
    ಕುಲ ವಿಹೀನನು ಕರ್ಣನಿವ ನಿನಗೆಂತು ಸರಿಯಹನು ।
    ತಲೆಯಮಾರಿ ಶರೀರವನು ಸಲೆ
    ಸಲಹಲೋಸುಗ ಕೌರವನ ತಂ
    ಬುಲಕೆ ಕಯ್ಯಾಂತವನು ಬಂಧುವೆ ಪಾರ್ಥ ಹೇಳೆಂದ ॥ [2020/10m/1c]

  16. ‘ಕುಮಾರವ್ಯಾಸನು ಕರ್ಣನ ಪಾತ್ರ ಚಿತ್ರಣದಲ್ಲಿ ತೋರಿದ ಕೌಶಲ್ಯದಿಂದಾಗಿ ಕರ್ಣನ ಮೂರ್ತಿ ಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ’ – ಈ ಹೇಳಿಕೆಯ ಔಚಿತ್ಯವನ್ನು ಸೋದಾಹರಣವಾಗಿ ವಿಶ್ಲೇಷಿಸಿರಿ. [2020/20m/2b]

  17. ಪಂಪನ ‘ವಿಕ್ರಮಾರ್ಜುನ ವಿಜಯ’ ಮತ್ತು ನಾರಣಪ್ಪನ ‘ಕುಮಾರವ್ಯಾಸ ಭಾರತ’ ಗಳಲ್ಲಿ ಚಿತ್ರಿತವಾದ ಕರ್ಣನ ಪಾತ್ರದ ಸಾಮ್ಯ, ವ್ಯತ್ಯಾಸ ಮತ್ತು ವೈಶಿಷ್ಟ್ಯಗಳನ್ನು ಚರ್ಚಿಸಿ. [2019/20m/2a]

  18. ‘ಕುಮಾರವ್ಯಾಸ ಭಾರತ’ ದ ‘ಕರ್ಣ’ ಪರ್ವದಲ್ಲಿ ಕಂಡುಬರುವ ಕುಮಾರವ್ಯಾಸನ ರೂಪಕ ಶಕ್ತಿಯನ್ನು ವಿಶದೀಕರಿಸಿ. [2019/10m/4c]

  19. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕಾದಿ ಕೊಲುವೊಡೆ ಪಾಂಡುಸುತರು ಸ
    ಹೋದರರು ಕೊಲಲಿಲ್ಲ ಕೊಲ್ಲದೆ
    ಕಾದೆನಾದೊಡೆ ಕೌರವಂಗನಿಯಲಿ ಹೊಗಲಿಲ್ಲ
    ಬೇಧದಲಿ ಹೊಕ್ಕಿರಿದನೋ ಮಧು
    ಸೂದನನು ತಾನಕಟೆನುತ ಘನ ಚಿಂ
    ತೋದಧಿಯಲದ್ದವೊಲು ಮೌನದೊಳ್ಳಿದ್ದನಾ ಕರ್ಣ [2018/10m/1d]

  20. ‘ಕುಮಾರವ್ಯಾಸ ಭಾರತ’ದ ಕಾವ್ಯದಲ್ಲಿ ಕರ್ಣ ಮತ್ತು ಶಲ್ಯರ ನಡುವೆ ನಡೆಯುವ ವಾಗ್ವಾದಗಳನ್ನು ಕುರಿತು ಚರ್ಚಿಸಿ. [2018/20m/3a]

  21. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾಗ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ) ಮಗನು ದಳಪತಿಯಾದ ಗಡ ಕಾ
    ಳೆಗವ ನೋಡುವೆನೆಂಬ ವೊಲು ಜಗ
    ದಗಲದಲಿ ನೆರೆ ಕಡಿತ ವಿಕ್ಕಿತು ತಿಮಿರ ವನದೊಳಗೆ
    ಹೊಗರು ಕುವಳಯ ಕಳಿಯೆ ಸೊಂಪಿನ
    ನಗೆ ಸರೋರುಹಕೊಗೆಯೆ ವಿರಹದ
    ಢಗೆ ರಥಾಂಗದೊಳಳಿಯೆ ರವಿಯುದಯಾಚಳಕೆ ಬಂದ. [2017/10m/1b]

  22. ಕರ್ಣನ ಬದುಕೊಂದು ‘ದುರಂತಮಯ ವಿಧಿವಿಲಾಸ’ ಎಂಬುದನ್ನು ಕುಮಾರವ್ಯಾಸನ ಕಾವ್ಯದ ಹಿನ್ನೆಲೆಯಲ್ಲಿ ವಿಶ್ಲೇಷಿಸಿ. [2017/20m/2b]

  23. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದು 150 ಪದಗಳ ಮೇಲೆ) ಸಲಹಿದೊಡೆಯನ ಜೋಳವಾಳಿಗೆ
    ತಲೆಯ ಮಾಮಿವುದೊಂದು ಪುಣ್ಯದ
    ಫಲವು ಮರಣದ ಹೊತ್ತು ಕೃಷ್ಣನ ಕಾಬ ಸುಕೃತದ ಫಲ ।
    ಇಳೆಯ ಮೇಲಿನದಲ್ಲದಾರಿಗೆ
    ಫಲಿಸುವುದು ತಾ ಧನ್ಯನೆನುತೆವೆ
    ಹಳಚದಸುರಾಂತಕನ ನಿಕ್ಷಿಸುತಿರ್ದನಾ ಕರ್ಶಿ । [2016/10m/1c]

  24. “ವ್ಯಾಸಭಾರತದ ಕರ್ಣನಿಗಿಂತಲೂ ಕುಮಾರವ್ಯಾಸ ಭಾರತದ ಕರ್ಣನು ಉದಾತ್ತನು” ವಿಶ್ಲೇಷಿಸಿ. [2016/10m/3c]

  25. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (150 ಪದಗಳ ಉತ್ತರ ಮಿತಿ): ಕೊಟ್ಟ ಭಾಷೆಗೆ ಮರಳಿ ಬಾಣವ
    ತೊಟ್ಟನೇ ತಾನೊಡೆಯ ನೆಂದರೆ
    ಯಟ್ಟಿದನೆ ಪಾಂಡವರೊಳನುಸಂಧಾನವನು ಬಿಸುಟು ।
    ನಟ್ಟ ಕಣೆಗಳುಕ್ಕಿದನೆ ಕೌರವ
    ಕೆಟ್ಟನಕಟಕಟೆಂದು ಕಾಯವ
    ಬಿಟ್ಟ ಕರ್ಣನೊಳಾರು ಸರಿಯೆನುತಿರ್ದುದಮರಗಣ ॥ [2015/10m/1b]

  26. ಕರ್ಣನ ಪಾತ್ರದ ಶೌರ್ಯ, ತ್ಯಾಗ, ನಿಷ್ಠೆ, ದುರ್ವಿಧಿ ವಿಲಾಸ ಇವುಗಳನ್ನು ಕುಮಾರವ್ಯಾಸನ ಕರ್ಣಪರ್ವದ ಹಿನ್ನೆಲೆಯಲ್ಲಿ ಚರ್ಚಿಸಿರಿ. [2015/20m/3a]

  27. ಪಂಪ ಮತ್ತು ಕುಮಾರವ್ಯಾಸರು ದುರ್ಯೋಧನನನ್ನು ಚಿತ್ರಿಸಿರುವ ಬಗೆಯ ವೈವಿಧ್ಯವನ್ನು ನಿಮ್ಮ ಪಠ್ಯಭಾಗದ ಹಿನ್ನೆಲೆಯಲ್ಲಿ ವಿವರಿಸಿರಿ. [2015/20m/4b]

  28. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ): ದ್ಯುಮಣಿ ಕರ್ಣದ್ಯುಮಣಿ ಸಹಿತ
    ಸ್ತಮಿಸೆ ಕಮಲಿನಿ ಕೌರವನ ಮುಖ
    ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕತಮದೊಡನೆ
    ಅಮಳ ಚಕ್ರಾಂಗಕ್ಕೆ ಭೂಪೋ
    ತ್ತಮನ ವಿಜಯಾಂಗನೆಗೆ ಅಗಲಿಕೆ
    ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ. [2014/10m/1b]

  29. ‘ಕರ್ಣಂಗೊಡ್ಡಿತ್ತು ದಲ್ ಭಾರತಂ’ ಎಂಬ ಪಂಪನ ಹೇಳಿಕೆಯನ್ನು ಕುಮಾರವ್ಯಾಸನ ಕರ್ಣನ ಪಾತ್ರದೊಡನೆ ಹೋಲಿಸಿ, ಎರಡರ ವ್ಯತ್ಯಾಸವನ್ನು ಚರ್ಚಿಸಿ. [2014/20m/2b]

  30. ಕುಮಾರವ್ಯಾಸನ ಕೃಷ್ಣನ ಪಾತ್ರದಲ್ಲಿ ಕಾಣುವ ‘ರಾಜಕಾರಣಿ’, ‘ದೈವತ್ವ’ ಮತ್ತು ‘ಮಾನವೀಯ’ ವ್ಯಕ್ತಿತ್ವಗಳನ್ನು ಉದಾಹರಣೆಗಳೊಂದಿಗೆ ವಿಶದೀಕರಿಸಿ. [2014/20m/3b]

  31. ಹರಿಹರನ ಭಕ್ತಿಯ ಪರಿಕಲ್ಪನೆಗೂ, ಕುಮಾರವ್ಯಾಸನ ಭಕ್ತಿಯ ಪರಿಕಲ್ಪನೆಗೂ ಇರುವ ಸಂಬಂಧಾಂತರಗಳನ್ನು ನಿಮಗಿಟ್ಟಿರುವ ಪಠ್ಯದ ಹಿನ್ನೆಲೆಯಲ್ಲಿ ವಿಶ್ಲೇಷಿಸಿರಿ. [2014/20m/4a]

  32. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (ಪ್ರತಿಯೊಂದೂ 125 ಪದಗಳ ಮಿತಿಯಲ್ಲಿ ಇರಲಿ) ಬಿಸುಟು ಹೋದನು ರಥವ ಸಾರಥಿ
    ವಸುಧೆಯಲಿ ರಥವದ್ದು ಕೆಡೆದುದು
    ನಿಶಿತ ಮಾರ್ಗಣವಿಲ್ಲ ಕೈಯ್ಯಲ್ಲಿ ದಿವ್ಯ ಧನುವಿಲ್ಲ
    ಎಸುವಡೆಂತೇಳುವುವು ಕಯ್ ನೀ
    ಬೆಸಸುವೊಡೆ ಮನವೆಂತು ಬಂದುದು
    ಬಸುರ ಶಿಬಿ ಬಲುಹಾಯ್ತು ಕರ್ಣನ ಕೊಲುವವನಲ್ಲೆಂದ. [2013/10m/1c]

  33. ಕರ್ಣನ ಸಾವಿನ ಸಂದರ್ಭದಲ್ಲಿ ದುರ್ಯೋಧನನ ಪ್ರಲಾಪವನ್ನು ಕುಮಾರವ್ಯಾಸ ಚಿತ್ರಿಸಿರುವ ಬಗೆಯನ್ನು ವಿವರಿಸಿ. (250 ಪದಗಳು) [2013/20m/2b]

  34. ‘ದುಶ್ಯಾಸನ ವಧಾ ಪ್ರಸಂಗ’ವು ಪಂಪಭಾರತದಲ್ಲಿ ಅಭಿವ್ಯಕ್ತಿಗೊಂಡ ಬಗೆಯನ್ನು ಕುಮಾರವ್ಯಾಸನ ಈ ಪ್ರಸಂಗದೊಡನೆ ಹೋಲಿಸಿ – ವಿಶ್ಲೇಷಿಸಿ. (250 ಪದಗಳು) [2013/20m/3b]

  35. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: ಶಿವಶಿವಾ ನಿರ್ಬಂಧವಿದು ಕೌ ।
    ರವನಲಾಯಿತೆ ಮಧ್ಯಮಯ ಗಂ ।
    ಧವನು ಕುಡಿಸುವ ಪರಿಯಲಾ ತುಂಬಿಗಳ ಸೆಱ್‌ವಿಡಿದು ।
    ಅವನಿಪತಿಗಳ ಸೇವೆಯಿದು ಕ ।
    ಷ್ಟವಲೆ ಮೊದಲಲಿ ಬಳಿಕ ನಾವಿ ।
    ನ್ನವಗಡಿಸಲೇನಹುದು ಸಾರಥಿಯಾದೆವೇಳೆಂದ ॥ [2012/12m/1c]

  36. ಅರ್ಜುನನನ್ನು ತೋರಿಸುವ ವಿಷಯದಲ್ಲಿ ಕರ್ಣ-ಶಲ್ಯರ ಒಳಜಗಳವನ್ನು ಕುಮಾರವ್ಯಾಸ ನಿರ್ವಹಿಸಿದ ರೀತಿಯನ್ನು ವಿವರಿಸಿ. [2012/30m/2b]

  37. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯಗಳನ್ನು ಕುರಿತು ಬರೆಯಿರಿ: ಕಳಚಿ ದುರಿಯೋಧನನ ಬೆಳುಗೊಡೆ
    ನೆಲಕೆ ಬೀಳ್ವಂದದಲಿ ಕೌರವ
    ಕುಲದ ನಿಖಿಳೈಶ್ವರ್ಯವಿಳೆಗೊರ್ಗುಡಿಸಿ ಕೆಡೆವಂತೆ
    ಥಳಥಳಿಪ ನಗೆಮೊಗದ ಗಂಟಿಕಿ
    ಬಲಿದ ಹುಬ್ಬಿನ ಬಿಟ್ಟ ಕಂಗಳ
    ಹೊಳೆವ ಹಲುಗಳ ಕರ್ಣಶಿರ ಕೆಡೆದುದು ಧರಿತ್ರಿಯಲಿ [2011/20m/1c]

  38. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯಗಳನ್ನು ಕುರಿತು ಬರೆಯಿರಿ: ದೇವ ಹಗೆಯಾಗಿರನು ಕರ್ಣನ
    ದಾವ ಹದನೆಂದರಿಯೆ ಮನದಲಿ
    ನೋವು ಮಿಗುವುದು ಕೈಗಳೇಳವು ತುಡುಕುವಡೆ ಧನುವ
    ಜೀವವೀತನ ಮೇಲೆ ಕರಗುವು
    ದಾವ ಸಖನೋ ಶತ್ರುವೆಂಬೀ
    ಭಾವನೆಯ ಬಗೆ ಬೀಳುಕೊಂಡುದು ಕರ್ಣನಾರೆಂದ ।। [2010/20m/1c]

  39. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯಗಳನ್ನು ಕುರಿತು ಬರೆಯಿರಿ: ಅಳುಕಿದನೆ ರಥ ಮುಗ್ಗಿದರೆ ಕಳ
    ವಳಿಸಿದನೆ ಶಲ್ಯಾಪಸರಣಕೆ
    ಕೆಲ ಬಲನ ಹಾರಿದನೆ ನರನವಗಡಿಸಿ ಕಾದಿದಡೆ ।
    ಬಲಿ ಮಥನ ಮಝು ಭಾಪು ಪಾಂಡವ
    ಬಲ ದಿಶಾಪಟ ರಾಯ ಮದನ
    ಪ್ರಳಯಹರ ಭಾಪೆಂದು ಹೊಗಳಿತು ವಂದಿ ಸಂದೋಹಂ ।। [2009/20m/1b]

  40. ಕರ್ಣನ ಪಾತ್ರದ ಶೌರ್ಯ, ತ್ಯಾಗ, ನಿಷ್ಠೆ, ದುರ್ವಿಧಿ ವಿಲಾಸ ಇವುಗಳನ್ನು ಚಿತ್ರಿಸುವಲ್ಲಿ ಕುಮಾರ ವ್ಯಾಸನು ಮೆರೆದಿರುವ ಪ್ರತಿಭಾ ವಿಲಾಸವನ್ನು ವಿವರಿಸಿರಿ. [2009/60m/3]

2.5] ರತ್ನಾಕರವರ್ಣಿ

35 questions

  1. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕೊಡದ ಸಾಲಂದದ ಮುಗಿಲ ಕಾಮನಬಿಲ್ಲು
    ಬಡಿಗೆಯಿಂ ಬಡಿಯೆ ದೈವಗಳು
    ಒಡೆದಂತೆ ಗುಡುಗಾದುದೊಳಗಿದ್ದ ನೀರು ತೊ
    ಟ್ಟಿಡುವಂತೆ ಕರೆದುದು ವೃಷ್ಟಿ [2026/10m/1e]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಭರತ-ಬಾಹುಬಲಿ ಯುದ್ಧದ ಪ್ರಸಂಗದಲ್ಲಿನ ಬದಲಾವಣೆ ಕುರಿತು ಕವಿ ರತ್ನಾಕರವರ್ಣಿ ಪ್ರಕಟಿಸಿರುವ ಔಚಿತ್ಯವನ್ನು ವಿವರಿಸಿ. [2026/20m/4a]

  3. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಭೋಗ ವಿಚಾರವು ಬೇಕು ನೃಪತಿಗಾತ್ಮ
    ಯೋಗ ವಿಚಾರವು ಬೇಕು ।
    ರಾಗ ರಸಿಕನಾಗಬೇಕು ಭಾವಿಸೆ ವೀತ
    ರಾಗ ರಸಿಕನಾಗ ಬೇಕು ।। [2025/10m/1d]

  4. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ರತ್ನಾಕರ ವರ್ಣಿಯು ‘ಭರತೇಶ ವೈಭವವನ್ನು ವೈಭವದ ಕಥೆಯಾಗಿಸಲು ಪ್ರಯತ್ನಿಸಿದರೂ ಅದು ‘ಆಧ್ಯಾತ್ಮ ರಸ’ ಪ್ರತಿಪಾದನೆಯಲ್ಲಿ ಪರ್ಯವಸಾನಗೊಂಡ ಬಗೆಯನ್ನು ಚರ್ಚಿಸಿ. [2025/20m/3a]

  5. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಬೆಳಗಿನೊಳೋಲಾಡುವಂತೆ ಸಂಗೀತದ
    ಸುಳಿಯೊಳು ತೇಲಾಡುವಂತೆ
    ತೆಳುಗಾಳಿಯೇರಿ ವೈಹಾವಳಿಯ ಮಾಡುವಂ
    ತೆಳೆವೆಂಗಳರಸಿ ಹಾಡಿದಳು [2024/10m/1d]

  6. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ‘ಭರತೇಶ ವೈಭವ’ ಕಾವ್ಯದ ವೈಶಿಷ್ಟತೆ. [2024/10m/2c]

  7. ‘ಭರತೇಶ ವೈಭವ’ ದಲ್ಲಿ ಭೋಗದ ಉತ್ತುಂಗತೆಯನ್ನು ಹೇಗೆ ಚಿತ್ರಿಸಲಾಗಿದೆ? ವಿವರಿಸಿ. [2023/10m/2c]

  8. ಕನ್ನಡದ ಕಾವ್ಯ ಪರಂಪರೆಯಲ್ಲಿ ರತ್ನಾಕರವರ್ಣಿ ಯಾಕೆ ಮುಖ್ಯ? ವಿಶ್ಲೇಷಿಸಿ. [2023/10m/3c]

  9. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಮಾರ್ಗವಲ್ಲೆಂಬಂತೆ ತೋರ್ಪುದನ್ವರಿಗೆ ಸ
    ನ್ಮಾರ್ಗದೊಳವನಿರು ತಿಹನು
    ಆರ್ಗೆ ತಿಳಯಬಹುದಾತ್ಮ ವಿಜ್ಞಾನಿಯಂ
    ತರ್ಗತವನು ಜಿನ ಬಲ್ಲ [2022/10m/1e]

  10. ಭೋಗ-ಯೋಗಗಳ ಸಾಮರಸ್ಯವನ್ನು ‘ಭರತೇಶ ವೈಭವ’ದಲ್ಲಿ ಹೇಗೆ ಚಿತ್ರಿಸಲಾಗಿದೆ? ವಿವರಿಸಿರಿ. [2022/10m/2c]

  11. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಸಕಲ ಲಕ್ಷಣವು ವಸ್ತುಕಕೆ, ವರ್ಣಕರಿಷ್ಟು
    ವಿಕಳವಾದರು ದೋಷವಿಲ್ಲ
    ಸಕಲ ಲಕ್ಷಣಕಾಗಿ ಬಿರುಸು ಮಾಡಿದರೆ ಪು
    ಸ್ತಕದ ಬದನೆಕಾಯಹುದು [2021/10m/1e]

  12. “ಭೋಗ ಮತ್ತು ಯೋಗಗಳ ಸಮನ್ವಯವು ರತ್ನಾಕರನ ಸಿದ್ಧಿಯಾಗಿದೆ” ಈ ಹೇಳಿಗೆಯನ್ನು ವಿಶದಪಡಿಸಿರಿ. [2021/20m/4a]

  13. ವೀರ ಭರತ – ಸಂಸಾರಿ ಭರತ – ಈ ವೈದೃಶ್ಯಗಳನ್ನು ಭರತೇಶ ವೈಭವಕಾವ್ಯವು ಹೇಗೆ ನಿಭಾಯಿಸಿದೆ? ಚರ್ಚಿಸಿ. [2020/10m/2c]

  14. ‘ಭರತೇಶ ವೈಭವ’ ಕಾವ್ಯದಲ್ಲಿ ಚಿತ್ರಣಗೊಂಡ ಬಾಹುಬಲಿಯ ಪಾತ್ರವು ಭರತನ ಪಾತ್ರದೆದುರು ಕುಬ್ಜವಾಗಿದೆಯೆ? ಪರಾಮರ್ಶಿಸಿ. [2020/20m/4b]

  15. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಉಂಡುಪ್ರವಾಸಿ ಬಳಸಿ ಬ್ರಹ್ಮ ಚಾರಿ ಭೂ
    ಮಂಡಲವಿದ್ದು ನಿಸ್ಸಂಗ
    ಮಂಡೆ ಬೆಳೆದು ಮನ ಬೋಳಾದ ತಪಸಿಯ
    ಕೊಂಡಾಡಲಳವೆ ಚಕ್ರಿಯ [2019/10m/1e]

  16. ಹಳೆಗನ್ನಡ ಮತ್ತು ನಡುಗನ್ನಡ ಕಾವ್ಯವೆಲ್ಲವೂ ಭೋಗ-ವೈರಾಗ್ಯ-ಭಕ್ತಿಗಳ ನಾಟ್ಯೀಕರಣವಾಗಿದೆ ಎನ್ನುವ ಮಾತನ್ನು ನಿಮಗಿಟ್ಟಿರುವ ಯಾವುದಾದರೂ ಎರಡು ಕಾವ್ಯಗಳ ಆಧಾರದಲ್ಲಿ ಪರಿಶೀಲಿಸಿ. [2019/10m/2c]

  17. ರತ್ನಾಕರವರ್ಣಿಯ ಮನೋಹರ ಶೈಲಿ ಮತ್ತು ಚಿತ್ರಕ ಶಕ್ತಿಯನ್ನು ‘ಭರತೇಶ ವೈಭವ’ ದ ಶೃಂಗಾರ ವರ್ಣನೆಯ ಭಾಗಗಳ ಉದಾಹರಣೆಗಳಿಂದ ವಿವರಿಸಿ. [2019/20m/4b]

  18. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
    ರಯ್ಯ ಮಂಚಿದಿಯೆನೆ ತೆಲುಗಾ
    ಅಯ್ಯ ಎಂಚ ಪೊರ್ಲಾಂಡೆಂದು ತುಳುವರು
    ಮೆಯ್ಯುಬ್ಬಿ ಕೇಳಬೇಕಣ್ಣಾ [2018/10m/1e]

  19. ‘ಭರತೇಶ ವೈಭವ’ ಕಾವ್ಯದಲ್ಲಿ ಚಿತ್ರಿತವಾಗಿರುವ ಭರತೇಶ ಮತ್ತು ಕುಸುಮಾಂಜಲಿ ಅವರ ದಾಂಪತ್ಯವನ್ನು ಕುರಿತು ಚರ್ಚಿಸಿ. [2018/20m/4a]

  20. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾಗ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ) ಛಾಯಾ ಪ್ರತಿಮೆಯ ಛಾಯಾ ಪುರುಷನ
    ಛಾಯೆಗೆ ಸುಜ್ಞಾನವಿಲ್ಲ।
    ಆಯೆರಡಕೆ ತಿಳಿವೊಡಗೂಡಲದು ತಾನೆ
    ಕಾಯದೊಳಿದ್ದಾತ್ಮರೂಪು । [2017/10m/1c]

  21. ‘ಜೈನಧರ್ಮ’ ಭೋಗದ ಅತಿರೇಕವನ್ನು ತೋರಿಸಿ ವೈರಾಗ್ಯದೆಡೆಗೆ ಕೊಂಡೊಯ್ಯುತ್ತದೆ ‘ಭರತೇಶ ವೈಭವ’ ದಲ್ಲಿ ಈ ಅಂಶ ಹೇಗೆ ವ್ಯಕ್ತವಾಗಿದೆ? [2017/10m/2c]

  22. ಭೋಗ ಮತ್ತು ಯೋಗ ಸಂಬಂಧದ ವೈಶಿಷ್ಟ್ಯತೆಯನ್ನು ಭರತೇಶವೈಭವದಲ್ಲಿ ಹೇಗೆ ಪ್ರತಿಪಾದಿಸಲಾಗಿದೆ? ವಿವರಿಸಿ. [2017/10m/4c]

  23. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದು 150 ಪದಗಳ ಮೇಲೆ) ಆಗಾಗ ದೇಹ ಚೀರಾತ್ಮ ಬೇಕೆಂದು ವಿ ।
    ಭಾಗಿಸಿ ತನ್ನ ತಾ ನೆಮ್ಮಿ ।।
    ಭೋಗಿಸಿದರೆ ಕರ್ಮ ಬಂಧವಿಲ್ಲಾಗಿ ಯಾ ।
    ಭೋಗಿ ತಾನೇ ಯೋಗಿಯತ್ತೆ ।। [2016/10m/1e]

  24. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ‘ಭರತೇಶವೈಭವ’ ಕಾವ್ಯಕ್ಕೆ ಇರುವ ವೈಶಿಷ್ಟ್ಯತೆಯನ್ನು ವಿವರಿಸಿ. [2016/20m/4a]

  25. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (150 ಪದಗಳ ಉತ್ತರ ಮಿತಿ): ನಿಮಗೆ ಕೆಲಸವಿಲ್ಲ ನಿಮ್ಮಾಣ್ಮಗಾದರೆ
    ಸುವಿವೇಕಯೆಳ್ಳನಿತಿಲ್ಲ
    ಅವನಿಯನಾಳುತ ಮುನಿಯಂತೆ ನಡೆವುದಿ
    ದವಿವೇಕಿಗಳ ನಡೆಯಲ್ತೆ. [2015/10m/1c]

  26. ಭರತೇಶನನ್ನು ಆದರ್ಶ ಮಾನವನಾಗಿ ಚಿತ್ರಿಸುವಲ್ಲಿ ರತ್ನಾಕರ ಯಶಸ್ಸನ್ನು ಸಾಧಿಸಿರುವ ಬಗೆಯನ್ನು ವಿವರಿಸಿರಿ. [2015/20m/4a]

  27. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ): ದೇಗುಲ ಭಾರವ ಗೋಡೆ ಕಂಭದ ಮಂಡೆ
    ಗಾಗಿಸಿ ದೇವರಿಪ್ಪಂತೆ
    ಭಾಗಿಸಿ ಧರೆಯ ದಂದುಗವನಾಪ್ತರಿಗೆ ಸಂ
    ಯೋಗಿಸಿ ಸುಖದಿ ತಾನಿಹನು. [2014/10m/1c]

  28. ‘ಭರತೇಶ ವೈಭವ’ ಕಾವ್ಯದಲ್ಲಿ ಭೋಗ ಮತ್ತು ವೈರಾಗ್ಯದ ನಿರೂಪಣೆಯಲ್ಲಿ ಕವಿ ತೋರಿರುವ ವೈಶಿಷ್ಟ್ಯತೆಯನ್ನು ಚರ್ಚಿಸಿ. [2014/10m/2c]

  29. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: (ಪ್ರತಿಯೊಂದೂ 125 ಪದಗಳ ಮಿತಿಯಲ್ಲಿ ಇರಲಿ) ಲೋಕವೆಲ್ಲೆನ್ನ ನೋಲೈಸುತಿರ್ದರು ನಾನು
    ಲೋಕವ ಬೆರಸೆನೆಂಬುದನು
    ಲೋಕಕರಿಕೆ ಮಾಡಲೆಂದು ನಿಂದಂತೆ ನಾ
    ನೇಕಾಕಿಯಾಗಿರ್ದನಾಗ [2013/10m/1d]

  30. ಭರತೇಶವೈಭವದ ನವರಾತ್ರಿ ಸಂಧಿಯ ವೈಶಿಷ್ಟ್ಯವನ್ನು ವಿವರಿಸಿ. (125 ಪದಗಳು) [2013/10m/2c]

  31. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ: ಭೋಗ ವಿಚಾರವು ಬೇಕು ನೃಪತಿಗಾತ್ಮ-
    ಯೋಗ ವಿಚಾರವು ಬೇಕು
    ರಾಗರಸಿಕನಾಗಬೇಕು ಭಾವಿಸೆ ವೀತ-
    ರಾಗರಸಿಕನಾಗಬೇಕು ॥ [2012/12m/1e]

  32. ‘ಭರತೇಶ ವೈಭವ’ ದಲ್ಲಿಯ ಭರತ-ಬಾಹುಬಲಿ ಪ್ರಸಂಗದಲ್ಲಿ ವ್ಯಕ್ತವಾಗುವ ಭರತ-ಬಾಹುಬಲಿಯರ ವ್ಯಕ್ತಿತ್ವವನ್ನು ಪರಿಚಯಿಸಿ. [2012/30m/3a]

  33. ಭರತೇಶ ವೈಭವದಲ್ಲಿ ನೀವು ಪಠ್ಯವಾಗಿ ಓದಿರುವ ಭಾಗದಲ್ಲಿ ಆದರ್ಶರಾಜನ ಗುಣಗಳು ನಿರೂಪಿತವಾಗಿರುವ ಬಗೆಯನ್ನು ಸಂಕ್ಷಿಪ್ತವಾಗಿ ವಿವರಿಸಿರಿ. [2011/30m/3b]

  34. ಭರತೇಶನ ಯೋಗ-ಭೋಗ ಸಮನ್ವಯವನ್ನು ಎರಡು ಪ್ರಸಂಗಗಳನ್ನು ವಿಶ್ಲೇಷಿಸಿ ಚರ್ಚಿಸಿರಿ. [2010/60m/3]

  35. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪದ್ಯಗಳ ಸಂದರ್ಭವನ್ನು ಸೂಚಿಸಿ, ಅವುಗಳ ಭಾವ ಮತ್ತು ಸ್ವಾರಸ್ಯಗಳನ್ನು ಕುರಿತು ಬರೆಯಿರಿ: ಒಳಗಿದ್ದ ದೇವ ಕಾಣದೆ ಹೊರಗೆ ದೇ
    ಗುಲವ ಪೂಜಿಸುದೆಗ್ಗನಂತೆ
    ಒಳಗಣಾತ್ಮವ ಬಿಟ್ಟು ಮೈಯನೆ ತಾನೆಂದು
    ಸಲೆ ಹೊಗಳಿಸಿ ಕೊಳುತಿಹರು. [2009/20m/1d]

Cover of the UPSC Mains Topic-wise and Year-wise PYQs book (2013–2026)

From the Optional Province team

Strengthen your GS papers

Our UPSC Mains Topic-wise & Year-wise PYQ Book (2013–2026) maps every GS question to the syllabus, so you know what UPSC asks and how often. Now available as a hard copy and an eBook.

Buy Hard Copy on AmazonBuy eBook (PDF)

Download a free sample

Spotted an error? Tell us.

We classify every PYQ with care, but mistakes can slip in. If a question is in the wrong topic, has a typo, the wrong year, or is missing, let us know. We review every report and update the page.

Report an Error

« Previous: ವಿಭಾಗ ಅ: ಹಳಗನ್ನಡ ಸಾಹಿತ್ಯ · Next: ವಿಭಾಗ ಬ: ಆಧುನಿಕ ಕನ್ನಡ ಸಾಹಿತ್ಯ »

Back to: Kannada Literature Optional PYQs – Topic-wise

Last updated: 2 November 2026